ಚೆಸ್‌: ಆನಂದ್‌ಗೆ ಸ್ಪಾರ್ಕಸನ್ ಟ್ರೋಫಿ ಡಾರ್ಟ್‌ಮಂಡ್‌, ಜರ್ಮನಿ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್ ಆನಂದ್ ಅವರು ಸ್ಪಾರ್ಕಸನ್‌ ಟ್ರೋಫಿ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಇಲ್ಲಿ ಕೊನೆಗೊಂಡ ಟೂರ್ನಿಯಲ್ಲಿ ಅವರು, ದೀರ್ಘಕಾಲದ ಎದುರಾಳಿ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಹಿಂದಿಕ್ಕಿದರು. ಬಿಳಿ ಕಾಯಿಗಳೊಂದಿಗೆ ಆಡಿದ ಮಾಜಿ ವಿಶ್ವ ಚಾಂಪಿಯನ್ ಆನಂದ್‌, ನಾಲ್ಕನೇ ಮತ್ತು ಕೊನೆಯ ಸುತ್ತಿನಲ್ಲಿ ಕ್ರಾಮ್ನಿಕ್ ಎದುರು ಡ್ರಾ ಸಾಧಿಸಿದರು. ಆ ಮೂಲಕ 2.5–1.5ರಿಂದ ಪಂದ್ಯ ಗೆದ್ದುಕೊಂಡರು. ಮೊದಲ ಗೇಮ್‌ನಲ್ಲಿ ಆನಂದ್ ಜಯ ಸಾಧಿಸಿದ್ದರು. ನಂತರದ ಮೂರು ಗೇಮ್‌ಗಳು ಡ್ರಾನಲ್ಲಿ ಅಂತ್ಯವಾಗಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.