| ಇಳವೆನ್ನಿಲ, ಅಪೂರ್ವಿಗೆ ನಿರಾಸೆ; ಫೈನಲ್‌ಗಿಲ್ಲ ಅರ್ಹತೆ ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ಸ್ ವಿಭಾಗದಲ್ಲಿ ಭಾರತೀಯ ಶೂಟರ್‌ಗಳು ನಿರಾಸೆ ಅನುಭವಿಸಿದ್ದಾರೆ. ಶನಿವಾರ ನಡೆದ ಸ್ಪರ್ಧೆಯಲ್ಲಿ ಇಳವೆನ್ನಿಲ ವಾಳರಿವನ್ ಹಾಗೂ ಅಪೂರ್ವಿ ಚಾಂಡೇಲ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದನ್ನೂ ಓದಿ: : ಆರ್ಚರಿಯಲ್ಲಿ ದೀಪಿಕಾ-ಜಾಧವ್ ಜೋಡಿ ಕ್ವಾರ್ಟರ್‌‌ಗೆ ಲಗ್ಗೆ ಇಳವೆನ್ನಿಲ ಹಾಗೂ ಅಪೂರ್ವಿ, ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಅನುಕ್ರಮವಾಗಿ 16 ಹಾಗೂ 36ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಅಪೂರ್ವಿ 34ನೇ ಸ್ಥಾನ ಪಡೆದಿದ್ದರು. ' 10m , @ @ 16th 36th . ' # #Tokyo2020#Cheer4India @ @ @ @ @ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.