| ಹಾಕಿ: ನ್ಯೂಜಿಲೆಂಡ್ ಮಣಿಸಿದ ಭಾರತ ಶುಭಾರಂಭ ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ವಿಭಾಗದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿರುವ ಭಾರತ ತಂಡವು ಶುಭಾರಂಭ ಮಾಡಿದೆ. 'ಎ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮನ್‌ಪ್ರೀತ್‌ಸಿಂಗ್ ಬಳಗವು ಅಮೋಘ ನಿರ್ವಹಣೆ ನೀಡುವ ಮೂಲಕ ಅರ್ಹ ಗೆಲುವು ದಾಖಲಿಸಿದೆ. ಇದನ್ನೂ ಓದಿ: : ಪದಕ ಬೇಟೆ ಆರಂಭ; ಮೊದಲ ಚಿನ್ನ ಗೆದ್ದ ಚೀನಾ ಶೂಟರ್ ಭಾರತದ ಪರ ಎರಡು ಗೋಲು (26 ಹಾಗೂ 33ನೇ ನಿಮಿಷ) ಬಾರಿಸಿದ ಹರ್ಮನ್‌ಪ್ರೀತ್ ಗೆಲುವಿನ ರೂವಾರಿ ಎನಿಸಿದರು. ಮಗದೊಂದು ಗೋಲು ರೂಪಿಂದರ್ ಪಾಲ್ (10ನೇ ನಿಮಿಷ) ಪಾಲಾಯಿತು. 3-2# # 5- . ../M8vmDdMqYi ನ್ಯೂಜಿಲೆಂಡ್ ಪರ ರಸೆಲ್ ಕೆ (21ನೇ ನಿಮಿಷ) ಹಾಗೂ ಜೆನೆಸ್ ಎಸ್ (27ನೇ ನಿಮಿಷ) ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಭಾನುವಾರ ನಡೆಯಲಿರುವ ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ. ಹಾಕಿಯಲ್ಲಿ 1980ರ ಬಳಿಕ ಪದಕ ಜಯಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ ತಂಡದಿಂದ ಪದಕದ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.