| ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಪದಕದ ಕನಸು ಭಗ್ನ ಟೋಕಿಯೊ: ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ನಿರೀಕ್ಷೆಯಾಗಿದ್ದ ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಜೋಡಿ ಸೋಲಿಗೆ ಶರಣಾಗುವುದರೊಂದಿಗೆ ಪದಕದ ಕನಸು ಭಗ್ನಗೊಂಡಿದೆ. ಶನಿವಾರ ನಡೆದ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದ ಪ್ರಿ-ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಭಾರತದ ಜೋಡಿ, ಮೂರನೇ ಶ್ರೇಯಾಂಕಿತರಾದ ಚೈನೀಸ್ ತೈಪೆಯ ಲಿನ್ ಯೂನ್-ಜು ಹಾಗೂ ಚೆಂಗ್ ಐ-ಚಿಂಗ್ ಜೋಡಿ ವಿರುದ್ಧ ಪರಾಭವಗೊಂಡರು. ಇದನ್ನೂ ಓದಿ: | ಹಾಕಿ: ನ್ಯೂಜಿಲೆಂಡ್ ಮಣಿಸಿದ ಭಾರತ ಶುಭಾರಂಭ ಮೊದಲೆರಡು ಗೇಮ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡರೂ ಅದರ ಸ್ಪಷ್ಟ ಲಾಭ ಪಡೆಯಲು ಭಾರತದ ಜೋಡಿಗೆ ಸಾಧ್ಯವಾಗಲಿಲ್ಲ. ಪರಿಣಾಮ 11-8, 11-6, 11-5, 11-4ರ ಅಂತರದಲ್ಲಿ ಸೋಲಿಗೆ ಶರಣಾದರು. .@sharathkamal1 @manikabatra_TT ' # 16 #Tokyo2020 ’ #Cheer4India@ @ @ @ @ 12ನೇ ಶ್ರೇಯಾಂಕಿತ ಮಣಿಕಾ-ಶರತ್ ಜೋಡಿ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯನ್ನು ಗೆದ್ದು ಟೋಕಿಯೊ ಟಿಕೆಟ್ ಪಡೆದಿದ್ದರು. ಮಣಿಕಾ ಬಾತ್ರಾ ಹಾಗೂ ಸುತೀರ್ಥಾ ಮುಖರ್ಜಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಇಂದು ಕಣಕ್ಕಿಳಿಯಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.