ಟೋಕಿಯೊ ಒಲಿಂಪಿಕ್ಸ್‌: ಚಿನ್ನ ಗೆಲ್ಲುವವರಿಗೆ ಐಒಎದಿಂದ ₹ 75 ಲಕ್ಷ ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವವರಿಗೆ ₹ 75 ಲಕ್ಷ ನೀಡಲಾಗುವುದು ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಗುರುವಾರ ತಿಳಿಸಿದೆ. ಬೆಳ್ಳಿ ಪದಕ ಗೆಲ್ಲುವವರಿಗೆ ₹ 40 ಲಕ್ಷ ಮತ್ತು ಕಂಚಿನ ಪದಕ ಗಳಿಸುವವರಿಗೆ ₹ 25 ಲಕ್ಷ, ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬರಿಗೆ ತಲಾ ಒಂದು ಲಕ್ಷ ನೀಡುವುದಾಗಿಯೂ ಹೇಳಿದೆ. ಸಲಹಾ ಸಮಿತಿಯ ಶಿಫಾರಸುಗಳನ್ನು ಐಒಎ ಒಪ್ಪಿಕೊಂಡಿದೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಕ್ರೀಡೆಯನ್ನು ಪ್ರತಿನಿಧಿಸುವ ಫೆಡರೇಷ್‌ನ್‌ಗೆ ತಲಾ ₹ 25 ಲಕ್ಷ ಹೆಚ್ಚುವರಿ ಹಣ ನೀಡಲು ಮತ್ತು ಪದಕ ಗೆಲ್ಲುವ ಕ್ರೀಡೆಯನ್ನು ಪ್ರತಿನಿಧಿಸುವ ಫೆಡರೇಷನ್‌ಗೆ ₹ 30 ಲಕ್ಷ ನೀಡಲು, ಪ್ರತಿಯೊಬ್ಬರಿಗೆ ದಿನವೊಂದಕ್ಕೆ ₹ 50 ಭತ್ಯೆ ನೀಡಲು ಶಿಫಾರಸು ಮಾಡಿದೆ. ‘ಪದಕ ವಿಜೇತರಿಗೆ ಮತ್ತು ಪದಕ ವಿಜೇತರನ್ನು ತಯಾರು ಮಾಡುವ ಫೆಡರೇಷನ್‌ಗಳಿಗೆ ಐಒಎ ಬಹುಮಾನ ನೀಡುತ್ತಿರುವುದು ಇದೇ ಮೊದಲು’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.