| ಟಿಟಿಯಲ್ಲಿ ಶರತ್ ಕಮಲ್ 3ನೇ ಸುತ್ತಿಗೆ ಲಗ್ಗೆ ಟೋಕಿಯೊ: ಭಾರತದ ಭರವಸೆಯಾಗಿರುವ ಅನುಭವಿ ಟೇಬಲ್ ಟೆನಿಸ್ ಪಟು ಶರತ್ ಕಮಲ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಹೋರಾಟದಲ್ಲಿ ಪೋರ್ಚುಗಲ್‌ನ ಟಿಯಾಗೊ ಪೊಲೊನಿಯಾ ವಿರುದ್ಧ 2-11 11-8 11-5 9-11 11-6 11-9ರಿಂದ ಗೆಲುವು ಸಾಧಿಸಿದರು. ಇದನ್ನೂ ಓದಿ: ಫೆನ್ಸಿಂಗ್ | ಭವಾನಿ ದೇವಿಗೆ ಗೆಲುವಿನ ಆರಂಭ ಮೊದಲ ಗೇಮ್‌‍ನಲ್ಲಿ ಹಿನ್ನಡೆ ಅನುಭವಿಸಿದ 39 ವರ್ಷದ ಶರತ್, ಬಳಿಕ ತಮ್ಮ ಲಯ ಕಂಡುಕೊಂಡು ಎದುರಾಳಿ ಮೇಲೆ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದರು. 49 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಪಂದ್ಯ ವಶಪಡಿಸಿಕೊಂಡರು. @sharathkamal1 3 # ' . 4 2 ' .#Tokyo2020#Cheer4India ../n7FFOALR7M ಇದೀಗ ನಡೆಯಲಿರುವ ಮೂರನೇ ಸುತ್ತಿನ ಹೋರಾಟದಲ್ಲಿ ಶರತ್ ಅವರು ರಿಯೋ ಒಲಿಂಪಿಕ್ಸ್ ಚಾಂಪಿಯನ್ ಮಾ ಲಾಂಗ್ ಸವಾಲನ್ನು ಎದುರಿಸಲಿದ್ದಾರೆ. ಈ ಮೂಲಕ ಕಠಿಣ ಸವಾಲು ಎದುರಾಗಿದೆ. ಇದೇ ವಿಭಾಗದಲ್ಲಿ ಭಾನುವಾರ ಸ್ಪರ್ಧಿಸಿದ್ದ ಜಿ. ಸತ್ಯನ್ ಸೋಲಿಗೆ ಶರಣಾಗಿ ಹೊರಬಿದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಮಣಿಕಾ ಬಾತ್ರಾ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.