| ಭಾರತದ ಆರ್ಚರಿ ಪುರುಷರ ತಂಡ ಕ್ವಾರ್ಟರ್‌ಗೆ ಲಗ್ಗೆ ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಆರ್ಚರಿ ಪುರುಷರ ತಂಡ ವಿಭಾಗದಲ್ಲಿ ಭಾರತ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಪುರುಷರ ತಂಡದ ಎಲಿಮಿನೇಷನ್ಸ್‌ನಲ್ಲಿ ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣದೀಪ್ ರಾಯ್ ಅವರನ್ನೊಳಗೊಂಡ ಭಾರತ ತಂಡ ಕಜಕಿಸ್ತಾನ ವಿರುದ್ಧ 6-2ರಿಂದ ಗೆದ್ದು ಅಂತಿಮ ಎಂಟರ ಹಂತವನ್ನು ಪ್ರವೇಶಿಸಿದೆ. ಇದನ್ನೂ ಓದಿ: : ಫೆನ್ಸಿಂಗ್‌ನಲ್ಲಿ ಭವಾನಿ ದೇವಿ ಕನಸು ಭಗ್ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಕೊರಿಯಾ ವಿರುದ್ಧ ಸ್ಪರ್ಧಿಸಲಿದ್ದು, ಕಠಿಣ ಸವಾಲು ಎದುರಾಗಲಿದೆ. ಈಸ್ಪರ್ಧೆಯು ಭಾರತೀಯ ಕಾಲಮಾನಇಂದು ಬೆಳಗ್ಗೆ 10.15ಕ್ಕೆ ನಡೆಯಲಿದೆ. ’ , , 6-2 . 10:15 #Cheer4India #Tokyo2020 ../RjwsM6smaK ಕಜಕಿಸ್ತಾನದ ವಿರುದ್ಧ ಅತನು ದಾಸ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಲ್ಲದೆ ಆರು ಬಾರಿ 'ಫರ್ಫೆಕ್ಟ್ 10'ಗೆ ಗುರಿಯಿಟ್ಟರು. ಶನಿವಾರದಂದು ಆರ್ಚರಿ ಮಿಶ್ರ ರಿಕರ್ವ್ ವಿಭಾಗದಲ್ಲಿ ಪ್ರವೀಣ್ ಕುಮಾರ್ ಹಾಗೂ ದೀಪಿಕಾ ಕುಮಾರಿ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.