ಬಾಕ್ಸಿಂಗ್‌ | ಆಶಿಶ್ ಕುಮಾರ್ ನಿರ್ಗಮನ ಟೋಕಿಯೊ: ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ನಿರಾಸೆ ಎದುರಾಗಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಆಶಿಶ್ ಕುಮಾರ್ ಸೋಲು ಅನುಭವಿಸಿದ್ದಾರೆ. ಸೋಮವಾರ ನಡೆದ ಪುರುಷರ 75 ಕೆ.ಜಿ. ವಿಭಾಗದಲ್ಲಿ ಆಶಿಶ್ ಕುಮಾರ್, ಚೀನಾದ ಎರ್ಬಿಕ್ ಟೌಹೆಟಾ ವಿರುದ್ಧ 0-5ರ ಅಂತರದಲ್ಲಿ ಸೋಲು ಅನುಭವಿಸಿದರು. ಇದನ್ನೂ ಓದಿ: : ಫೆನ್ಸಿಂಗ್‌ನಲ್ಲಿ ಭವಾನಿ ದೇವಿ ಕನಸು ಭಗ್ನ ' . 👍# #Tokyo2020 27 ವರ್ಷದ ಹಿಮಾಚಲ ಪ್ರದೇಶ ಮೂಲದ ಆಶಿಶ್, ಅವರಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಮೂಡಿಬರಲಿಲ್ಲ. ಇದರೊಂದಿಗೆ ವಿಕಾಸ್ ಕೃಷ್ಣನ್ (69 ಕೆ.ಜಿ) ಹಾಗೂ ಮನೀಶ್ ಕೌಶಿಕ್ (63 ಕೆ.ಜಿ) ಬೆನ್ನಲ್ಲೇ ಆಶಿಶ್ ಕುಮಾರ್ ಸಹ ನಿರ್ಗಮನದ ಹಾದಿ ಹಿಡಿದಿದ್ದಾರೆ. ಇದೀಗ ಬಾಕ್ಸಿಂಗ್‌ ವಿಭಾಗದಲ್ಲಿ ಭಾರತದ ಏಕ ಮಾತ್ರ ಭರವಸೆಯಾಗಿರುವ ಲವ್ಲಿನಾ ಬೊರ್ಗೊಹೈನ್‌ (69 ಕೆಜಿ) ಬುಧವಾರದಂದು ಕಣಕ್ಕಿಳಿಯಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.