ಈಜು | ಸೆಮಿಫೈನಲ್‌‌ಗೆ ಪ್ರವೇಶಿಸುವಲ್ಲಿ ಸಜನ್ ಪ್ರಕಾಶ್ ವಿಫಲ ಟೋಕಿಯೊ: ಭಾರತದ ಭರವಸೆಯ ಈಜುಪಟು ಸಜನ್ ಪ್ರಕಾಶ್, ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಸೋಮವಾರ ನಡೆದ ಪುರುಷರ 200 ಮೀಟರ್ ಬಟರ್‌ಫ್ಲೈ ಹೀಟ್ 2ರಲ್ಲಿಸಜನ್, ನಾಲ್ಕನೇಯವರಾಗಿ ಈಜಿ ದಡ ಸೇರಿದರು. ಇದನ್ನೂ ಓದಿ: ಟೆನಿಸ್ | ಸಿಂಗಲ್ಸ್‌ನಿಂದ ಸುಮಿತ್ ನಗಾಲ್ ಹೊರಕ್ಕೆ .@swim_sajan 1:57.22 200m ##Tokyo2020 # 200 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಒಂದು ನಿಮಿಷ 57.22 ಸೆಕೆಂಡುಗಳಲ್ಲಿ ಸಜನ್ ಗುರಿ ಮುಟ್ಟಿದರು. ಈ ಮೂಲಕ 38 ಸ್ಪರ್ಧಿಗಳ ಪೈಕಿ ಒಟ್ಟಾರೆಯಾಗಿ 24ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಲ್ಲದೆಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸುವ ಅವಕಾಶದಿಂದ ವಂಚಿತರಾದರು. ಅಗ್ರ 16 ಈಜುಪಟುಗಳು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಕಳೆದ ತಿಂಗಳು ಇಟಲಿಯಲ್ಲಿ ನಡೆದ ಅರ್ಹತಾ ಸ್ಪರ್ದೆಯಲ್ಲಿ ಒಂದು ನಿಮಿಷ 56.38 ಸೆಕೆಂಡುಗಳಲ್ಲಿ ಕ್ರಮಿಸಿದ ಸಜನ್ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಸರಿಗಟ್ಟುವಲ್ಲಿ ವಿಫಲರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.