| ಟೇಬಲ್ ಟೆನಿಸ್ ಸಿಂಗಲ್ಸ್‌ನಿಂದ ಹೊರಬಿದ್ದ ಸತ್ಯನ್ ಟೋಕಿಯೊ: ತಮಗಿಂತಲೂ ಕೆಳಗಿನ ರ‍್ಯಾಂಕಿಂಗ್ ಸ್ಪರ್ಧಿಯಿಂದ ಅಚ್ಚರಿಯ ಸೋಲಿನ ಆಘಾತ ಎದುರಿಸಿರುವ ಭಾರತದ ಟೇಬಲ್ ಟೆನಿಸ್ ಪಟು ಜಿ. ಸತ್ಯನ್, ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವ ನಂ. 38 ರ‍್ಯಾಂಕ್‌ನ ಸತ್ಯನ್, ಹಾಂಕಾಂಗ್‌ನ ಸು ಹ್ಯಾಂಗ್ ವಿರುದ್ಧ 3-4ರ ಅಂತರದಲ್ಲಿ ಸೋಲು ಅನುಭವಿಸಿದರು. ಇದನ್ನೂ ಓದಿ: | ಸಾನಿಯಾ-ಅಂಕಿತಾ ಜೋಡಿಗೆ ಸೋಲಿನ ಆಘಾತ ಕ್ರೀಡಾಕೂಟದಲ್ಲಿ 26ನೇ ಶ್ರೇಯಾಂಕಿತ ಸತ್ಯನ್ ಅವರ ಬಳಿ ವಿಶ್ವದ 95ನೇ ರ‍್ಯಾಂಕ್‌ ಆಟಗಾರನ ಅನಿರೀಕ್ಷಿತ ಹೊಡೆತಗಳಿಗೆ ಉತ್ತರವೇ ಇರಲಿಲ್ಲ. ' # .#Tokyo2020 ಟೋಕಿಯೊ ಒಲಂಪಿಕ್ಸ್‌ನಲ್ಲಿ ಜಿ. ಸತ್ಯನ್ ಭಾರತದ ಭರವಸೆಯಾಗಿದ್ದರು. ಆದರೆ ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಿರೀಕ್ಷೆ ತಲುಪುವಲ್ಲಿ ವಿಫಲರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.