: ಹಿದಿಲಿನ್‌ ಡಯಾಸ್,ಫಿಲಿಪ್ಪೀನ್ಸ್‌ನ ‘ಚಿನ್ನ’ ಟೋಕಿಯೊ: ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಚಾಂಪಿಯನ್ ಆದ ಹಿದಿಲಿನ್ ಡಯಾಸ್ ಅವರು ಫಿಲಿಪ್ಪೀನ್ಸ್‌ಗೆ ಚಿನ್ನದ ಸಂಭ್ರಮ ತಂದುಕೊಟ್ಟರು. ಇದು, ಆ ದೇಶ ಒಲಿಂಪಿಕ್ಸ್‌ನಲ್ಲಿ ಗಳಿಸಿದ ಮೊದಲ ಚಿನ್ನದ ಪದಕವಾಗಿದೆ. ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ 30 ವರ್ಷದ ಹಿದಿಲಿನ್ ಒಟ್ಟು 224 ಕೆಜಿ ಭಾರ ಎತ್ತಿ ಒಲಿಂಪಿಕ್ಸ್‌ ದಾಖಲೆಯನ್ನೂ ಬರೆದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖವನ್ನು ಕೈಗಳಿಂದ ಒತ್ತಿ ಹಿಡಿದ ಅವರು ಆನಂದಬಾಷ್ಪ ಸುರಿಸಿದರು. ಪದಕ ಪ್ರದಾನ ಸಮಾರಂಭದಲ್ಲೂ ಭಾವುಕರಾಗಿದ್ದ ಅವರು ‘ಅಟೆನ್ಶನ್‌’ನಲ್ಲಿ ನಿಂತು ಸಲ್ಯೂಟ್ ಹೊಡೆದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಚೀನಾದ ಲಿಯಾವೊ ಕ್ಯುಯುನ್ ಬೆಳ್ಳಿ ಪದಕ ಮತ್ತು ಕಜಕಸ್ತಾನದ ಜುಲ್ಫಿಯಾ ಕಂಚಿನ ಪದಕ ಗೆದ್ದುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.