: ಸೇಲಿಂಗ್‌ ಪಟುಗಳಿಗೆ ನಿರಾಸೆ ಟೋಕಿಯೊ: ಭಾರತದ ಸೇಲಿಂಗ್ ಪಟುಗಳಾದ ವಿಷ್ಣು ಸರವಣನ್‌ ಮತ್ತು ನೇತ್ರಾ ಕುಮನನ್ ಅವರು ಸ್ಪರ್ಧೆಯ ಎರಡನೇ ದಿನವೂ ನಿರಾಸೆ ಮೂಡಿಸಿದರು. ಮಹಿಳೆಯರ ಲೇಸರ್‌ರೇಡಿಯಲ್‌ ವಿಭಾಗದಲ್ಲಿ ಮೂರನೇ ರೇಸ್‌ನಲ್ಲಿ ನೇತ್ರಾ 15ನೇ ಸ್ಥಾನ ಗಳಿಸಿದರೆ, ನಾಲ್ಕನೇ ರೇಸ್‌ಅನ್ನು 40ನೇ ಸ್ಥಾನ ದೊಂದಿಗೆ ಕೊನೆಗೊಳಿಸಿದರು. ಪುರುಷರ ಲೇಸರ್‌ ವಿಭಾಗದಲ್ಲಿ ಕಣಕ್ಕಿಳಿದಿರುವ ವಿಷ್ಣು ಎರಡನೇ ರೇಸ್‌ನಲ್ಲಿ 20ನೇ ಸ್ಥಾನ ಗಳಿಸಿದರೆ, ಮೂರನೇ ರೇಸ್‌ನಲ್ಲಿ 24ನೇ ಸ್ಥಾನ ಗಳಿಸಿದರು. ಮಂಗಳವಾರ ಐದು ಹಾಗೂ ಆರನೇ ರೇಸ್‌ನಲ್ಲಿ ನೇತ್ರಾ ಅವರು ಅದೃಷ್ಟ ಪರೀಕ್ಷಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.