: ಚೀನಾಕ್ಕೆ ಮೊದಲ ಚಿನ್ನ ಟೋಕಿಯೊ: ಈ ಸಲದ ಕೂಟದಲ್ಲಿ ಮೊದಲ ಚಿನ್ನ ಗೆದ್ದ ದೇಶ ಎಂಬ ಹಿರಿಮೆಗೆ ಚೀನಾ ಪಾತ್ರವಾಯಿತು. ಮಹಿಳೆಯರ 10 ಮೀ. ಏರ್‌ ರೈಫಲ್‌ನಲ್ಲಿ ಸ್ಪರ್ಧಿಸಿದ್ದ ಈ ದೇಶದ ಶೂಟರ್‌ ಕ್ವಿಯಾನ್‌ ಯಾಂಗ್‌ ಚಿನ್ನಕ್ಕೆ ಗುರಿ ಇಟ್ಟರು. 251.8 ಸ್ಕೋರ್‌ ಗಳಿಸಿದ ಅವರು ಒಲಿಂಪಿಕ್‌ ದಾಖಲೆಯನ್ನೂ ನಿರ್ಮಿಸಿದರು. ರಷ್ಯಾ ಒಲಿಂಪಿಕ್‌ ಸಮಿತಿಯ ಅನಸ್ತೇಸಿಯಾ ಗಲಶಿನಾ (251.1) ಬೆಳ್ಳಿ ಗೆದ್ದರೆ, ಸ್ವಿಟ್ಜರ್ಲೆಂಡ್‌ನ ನಿನಾ ಕ್ರಿಸ್ಟಿನ್‌ (230.6) ಕಂಚು ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.