| ರೋಯಿಂಗ್ ರಿಪೇಚ್ ಸೆಮಿಫೈನಲ್‌ಗೆ ಅರ್ಜುನ್, ಅರವಿಂದ್ ಲಗ್ಗೆ ಟೋಕಿಯೊ: ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರನ್ನೊಳಗೊಂಡ ಭಾರತದ ರೋಯಿಂಗ್ ತಂಡವು, ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ರಿಪೇಚ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದೆ. ಸೀ ಫಾರೆಸ್ಟ್ ವಾಟರ್‌ವೇನಲ್ಲಿ ನೀರಿಗಿಳಿದಿದ್ದ ಭಾರತ ಜೋಡಿಯು 6 ನಿಮಿಷ 51.33 ಸೆಕೆಂಡುಗಳಲ್ಲಿ ಗುರಿ ತಲುಪಿತು. ಇದನ್ನೂ ಓದಿ: | ಮುಂದುವರಿದ ಭಾರತೀಯ ಶೂಟರ್‌ಗಳ ಕಳಪೆ ಪ್ರದರ್ಶನ ಈ ಮೂಲಕ ಲೈಟ್‌ವೇಟ್ ಡಬಲ್ ಸ್ಕಲ್ಸ್ ರಿಪೇಚ್ ವಿಭಾಗದಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡು ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆದರು. 3rd #Tokyo2020 6:51.36 /. ' #Cheer4India@ @ @@ ../TST5WclFMr ಈ ವಿಭಾಗದಲ್ಲಿ ಪೊಲೆಂಡ್‌ನ ಜೆರ್ಜಿ ಕೊವಾಸ್ಕಿ ಹಾಗೂ ಆರ್ಟೂರ್ ಮಿಕೊಲಾಜೆಸ್ಕಿ (6 ನಿ. 43.44 ಸೆ.) ಅಗ್ರಸ್ಥಾನ ಪಡೆದರೆ ಸ್ಪೇನ್‌ನ ಕ್ಯಾಟನೊ ಹೊರ್ಟಾ ಪಾಂಬೊ ಮತ್ತು ಮ್ಯಾನೆಲ್ ಬಾಲಸ್ಟೆಗುಯಿ (6 ನಿ. 45.71 ಸೆ.) ಎರಡನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.