| ಬಾಕ್ಸಿಂಗ್‌: ಒಂದು ಪಂದ್ಯ ಗೆದ್ದರೆ ಲವ್ಲಿನಾಗೆ ಪದಕ ಖಚಿತ ಟೋಕಿಯೊ: ಭಾರತದ ಲವ್ಲಿನಾ ಬೊರ್ಗೊಹೈನ್ ಅವರು ಒಲಿಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳೆಯರ 69 ಕೆಜಿ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಅವರು 3–2ರಿಂದ ಜರ್ಮನಿಯ ನದಿನ್‌ ಅಪೆಜ್ ಅವರನ್ನು ಸೋಲಿಸಿದರು. ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿರುವ ಲವ್ಲಿನಾ, ಎಂಟರಘಟ್ಟದ ಹಣಾಹಣಿಯಲ್ಲಿ ಚೀನಾ ತೈಪೆಯ ನಿಯೆನ್‌ ಚಿನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಇದೇ 30ರಂದು ಈ ಬೌಟ್‌ ನಿಗದಿಯಾಗಿದೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಿಯೆನ್‌ ಚಿನ್ ಚೆನ್ ಅವರನ್ನು ಸೋಲಿಸಿ, ಸೆಮಿ ಫೈನಲ್‌ಗೆ ಲಗ್ಗೆ ಹಾಕಿದರೆ ಲವ್ಲಿನಾಗೆ ಪದಕ ಖಚಿತವಾಗಲಿದೆ. ಈ ಉಪಾಂತ್ಯ ಪಂದ್ಯದಲ್ಲಿ ಸೋತರೂ ಕಂಚಿನ ಪದಕ ದೊರೆಯಲಿದೆ. ಒಂದು ವೇಳೆ ಫೈನಲ್‌ ಪ್ರವೇಶಿಸಿದರೆ ಚಿನ್ನದ ಪದಕಕ್ಕೆ ಸೆಣಸಬೇಕಾಗುತ್ತದೆ. ಸೋತರೆ ಬೆಳ್ಳಿ ಪದಕ ಸಿಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.