| ಸಿಂಧು ಮಿಂಚಿನ ಆಟ; ಪ್ರಿ-ಕ್ವಾರ್ಟರ್‌ಗೆ ಲಗ್ಗೆ ಟೋಕಿಯೊ: 2016 ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಮಿಂಚಿನ ಆಟ ಮುಂದುವರಿಸಿದ್ದು, ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್ 'ಜೆ' ಗುಂಪಿನ ಪಂದ್ಯದಲ್ಲಿ ವಿಶ್ವ ನಂ.7 ರ‍್ಯಾಂಕ್‌ನ ಸಿಂಧು, ಹಾಂಕಾಂಗ್‌ನ ಎನ್‌ವೈ ಚೆಯುಂಗ್ ವಿರುದ್ಧ 21-9 21-16ರಿಂದ ಗೆಲುವಿನ ನಗೆ ಬೀರಿದರು. ಇದನ್ನೂ ಓದಿ: | ಭಾರತ ಮಹಿಳಾ ಹಾಕಿ ತಂಡಕ್ಕೆ ಹ್ಯಾಟ್ರಿಕ್ ಸೋಲಿನ ಮುಖಭಂಗ ಭಾರತದ ಭರವಸೆಯ ತಾರೆಯಾಗಿರುವ ಸಿಂಧು ಅಮೋಘಆಟವಾಡುವ ಮೂಲಕ ಎದುರಾಳಿಯ ಮೇಲೆ ಪಾರಮ್ಯ ಮೆರೆದರು. ಅಲ್ಲದೆ ವಿಶ್ವ ನಂ. 34ನೇ ರ‍್ಯಾಂಕ್‌ನ ಚೆಯುಂಗ್ ವಿರುದ್ಧದ ಪಂದ್ಯವನ್ನು 35 ನಿಮಿಷದಲ್ಲೇ ವಶಪಡಿಸಿಕೊಂಡರು. 𝐘𝐀𝐘𝐘 🥳 # 🥈 @Pvsindhu1 🇭🇰' 21-9, 21-16 16 @tokyo2020 💪🏻###Tokyo2020#Cheer4India# # ../Q7TKTTG6Qu 26 ವರ್ಷದ ಸಿಂಧು, ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಶ್ವ ನಂ.12ನೇ ರ‍್ಯಾಂಕ್‌ನ ಮಿಯಾ ಬ್ಲೆಚ್‌ಫೆಲ್ಡ್ ಸವಾಲನ್ನು ಎದುರಿಸಲಿದ್ದಾರೆ. ಆಕೆಯ ವಿರುದ್ಧ 4-1ರ ಅಂತರದ ಗೆಲುವು-ಸೋಲಿನ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರನೇ ಶ್ರೇಯಾಂಕಿತೆ ಸಿಂಧು ಅವರು ಮೊದಲ ಪಂದ್ಯದಲ್ಲಿ ಇಸ್ರೇಲ್‌ನ ಸೆನಿಯಾ ಪೊಲಿಕರ್ಪೊವಾ ವಿರುದ್ಧ ಜಯಭೇರಿ ಮೊಳಗಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.