: ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ, ಭರವಸೆ ಮೂಡಿಸಿದ ಮನು ಭಾಕರ್ ಟೋಕಿಯೊ: ಟೋಕಿಯೂ ಒಲಿಂಪಿಕ್ಸ್ ಶೂಟಿಂಗ್ ವಿಭಾಗದ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಗಳಿಸಿರುವ ಭಾರತದ ಶೂಟರ್ ಮನು ಭಾಕರ್ ಭರವಸೆ ಮೂಡಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಪ್ರಿಸಿಷನ್ ಅರ್ಹತಾ ಸುತ್ತಿನಲ್ಲಿ 292 ಅಂಕ ಸಂಪಾದಿಸಿದ ಮನು ಭಾಕರ್, 5ನೇ ಸ್ಥಾನ ಗಳಿಸಿದರು. ಇದನ್ನೂ ಓದಿ: | ಎರಡು ಬಾರಿಯ ಚಾಂಪಿಯನ್ ವಿರುದ್ಧ ಅತನು ದಾಸ್ ಜಯಭೇರಿ ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಹಿ ಸರ್ನೋಬತ್ 287 ಅಂಕಗಳೊಂದಿಗೆ 25ನೇ ಸ್ಥಾನ ಗಳಿಸಿ ನಿರಾಸೆ ಮೂಡಿಸಿದರು. 25m ' @ : 292 (5th) @ : 287 (25th) 8 ’ . 8th 291#Cheer4India ಅಗ್ರ ಎಂಟು ಶೂಟರ್‌ಗಳು ಫೈನಲ್ಸ್‌ಗೆ ಅರ್ಹತೆಯನ್ನು ಪಡೆಯುತ್ತಾರೆ. ನಾಳೆ (ಶುಕ್ರವಾರ) ನಡೆಯಲಿರುವ ರ‍್ಯಾಪಿಡ್ ಫೈರ್ಹಂತದ ಬಳಿಕ ಯಾರೆಲ್ಲ ಫೈನಲ್‌ಗೆ ಅರ್ಹತೆ ಗಿಟ್ಟಿಸಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿವೆ. ಪ್ರಸ್ತುತ ಎಂಟನೇ ಸ್ಥಾನದಲ್ಲಿರುವ ಶೂಟರ್ 291 ಅಂಕಗಳನ್ನು ಹೊಂದಿದ್ದಾರೆ. ಹಾಗಾಗಿ ನಿಖರ ಗುರಿಯಿಡಲು ಯಶಸ್ವಿಯಾದ್ದಲ್ಲಿ ಮನು ಭಾಕರ್ ಫೈನಲ್‌ಗೇರುವುದರಲ್ಲಿ ಅನುಮಾನವೇ ಇಲ್ಲ. ಜುಲೈ 25ರಂದು ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಮನು ಭಾಕರ್ ವಿಫಲರಾಗಿದ್ದರು. ಈಗ ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.