| ಸೇಲಿಂಗ್‌ನಲ್ಲಿ ಮಿಂಚದ ಭಾರತೀಯ ಸ್ಪರ್ಧಿಗಳು ಎನೊಶಿಮಾ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ಭಾರತೀಯ ಸೇಲರ್‌ಗಳು ವಿಫಲರಾಗಿದ್ದಾರೆ. ಪುರುಷರ ಸ್ಕಿಫ್ 49ಇಆರ್ ಸೇಲಿಂಗ್ ಸ್ಪರ್ಧೆಯಲ್ಲಿ ಭಾರತದ ಗಣಪತಿ ಚೆಂಗಪ್ಪ ಹಾಗೂ ವರುಣ್ ಥಕ್ಕರ್ ಜೋಡಿಯು ಒಟ್ಟಾರೆಯಾಗಿ 17ನೇ ಸ್ಥಾನ ಪಡೆಯಿತು. ಇದನ್ನೂ ಓದಿ: | ರೋಯಿಂಗ್‌ನಲ್ಲಿ ಛಾಪು ಮೂಡಿಸಿದ ಭಾರತಕ್ಕೆ 11ನೇ ಸ್ಥಾನ ಆರನೇ ರೇಸ್‌ನಲ್ಲಿ 7ನೇ ಸ್ಥಾನ ಪಡೆದರೂ ಒಟ್ಟು 19 ಸ್ಪರ್ಧಿಗಳಿದ್ದ ಸ್ಪರ್ಧೆಯಲ್ಲಿ ಭಾರತ ಜೋಡಿಯು 76 ಅಂಕ ಗಳಿಸಲಷ್ಟೇ ಸಾಧ್ಯವಾಯಿತು. ಈ ವಿಭಾಗದಲ್ಲಿ ಆರು ರೇಸ್ ಹಾಗೂ ಪದಕ ಸುತ್ತಿನ ಸ್ಪರ್ಧೆಗಳು ಬಾಕಿ ಉಳಿದಿವೆ. # @VarunThakkar100 49er 06 7th . ' #Cheer4India #Tokyo2020 | # ಅತ್ತ ಲೇಸರ್ ಸ್ಪರ್ಧೆಯಲ್ಲಿ ವಿಷ್ಣು ಸರವಣನ್ 23ನೇ ಸ್ಥಾನ ಪಡೆದರು. ಒಟ್ಟು 35 ಸೇಲರ್‌ಗಳಿದ್ದ ಸ್ಪರ್ಧೆಯಲ್ಲಿ 138 ಅಂಕಗಳನ್ನು ಸಂಪಾದಿಸಿದರು. ಈ ವಿಭಾಗದಲ್ಲಿ ಇನ್ನೆರಡು ರೇಸ್ ಹಾಗೂ ಪದಕ ಸುತ್ತಿನ ಸ್ಪರ್ಧೆ ಬಾಕಿಯಿದೆ. ನೇತ್ರಾ ಕುಮನನ್ ಅವರಿಗೂ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮಹಿಳೆಯರ ಲೇಸರ್ ರೇಡಿಯಲ್ ವಿಭಾಗದಲ್ಲಿ 31ನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.