| ಕೊನೆಯ ಕ್ಷಣ ಮೇರಿಗೆ ರಿಂಗ್ ಡ್ರೆಸ್ ಬದಲಿಸಲು ಹೇಳಿದ್ದೇಕೆ? ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರೆಫರಿ ನಿರ್ಣಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಭಾರತದ ಹಿರಿಯ ಅನುಭವಿ ಬಾಕ್ಸರ್ ಮೇರಿ ಕೋಮ್, ಈಗ ತಮ್ಮನ್ನು ನಡೆಸಿಕೊಂಡಿರುವ ರೀತಿಯ ಬಗ್ಗೆಯೂ ಅಸಮಾಧಾನವನ್ನು ಹೊರಹಾಕಿದ್ದಾರೆ. ಗುರುವಾರ ನಡೆದ ನಿರ್ಣಾಯಕ ಪ್ರೀ-ಕ್ವಾರ್ಟರ್‌ಫೈನಲ್‌ ನಡೆಯುವ ಒಂದು ನಿಮಿಷದ ಮೊದಲು ರಿಂಗ್ ಡ್ರೆಸ್ ಬದಲಿಸಲು ಹೇಳಿರುವುದಾಗಿ ಮೇರಿ ಕೋಮ್ ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರೀಕ್ವಾರ್ಟರ್‌ ಫೈನಲ್‌ ತೀರ್ಪು: ಐಒಸಿ ಮೇಲೆ ಮೇರಿ ಕೋಮ್ ಆಕ್ರೋಶ | ಈ ಕುರಿತು ಟ್ವೀಟ್ ಮಾಡಿರುವ ಮೇರಿ, 'ಆಶ್ಚರ್ಯಕರ... ರಿಂಗ್ ಡ್ರೆಸ್ ಏನೆಂದು ಯಾರಾದರೂ ವಿವರಿಸಬಹುದೇ? ಪ್ರೀ-ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೂ ಒಂದು ನಿಮಿಷದ ಮೊದಲು ರಿಂಗ್ ಡ್ರೆಸ್ ಬದಲಿಸುವಂತೆ ಹೇಳಲಾಯಿತು. ಯಾರಾದರೂ ಹೇಳಬಹುದೇ' ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಕಿರಣ್ ರಿಜಿಜು ಮತ್ತು ಒಲಿಂಪಿಕ್ಸ್‌ಗೆ ಟ್ಯಾಗ್ ಮಾಡಿದ್ದಾರೆ. .. . . @ @ @ @ @ ../b3nwPXSdl1 ಮೇರಿ ಕೋಮ್, ಮಹಿಳೆಯರ 51 ಕೆ.ಜಿ. ವಿಭಾಗದ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಕೊಲಂಬಿಯಾದ ಇಂಗ್ರಿಟಾ ವೆಲೆನ್ಸಿಯಾ ವಿರುದ್ಧ 2-3 ರಿಂದ ಮೇರಿ ಸೋತಿದ್ದರು. ಎರಡು ರೌಂಡ್ ಗೆದ್ದ ಹೊರತಾಗಿಯೂ ರೆಫರಿ ತಮ್ಮ ವಿರುದ್ಧ ನೀಡಲಾದ ತೀರ್ಪಿನ ಬಗ್ಗೆ ಮೇರಿ ಕೋಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: | ಪ್ರಿ-ಕ್ವಾರ್ಟರ್‌ನಲ್ಲಿ ಎಡವಿದ ಮೇರಿ ಕೋಮ್ ಅಭಿಯಾನ ಅಂತ್ಯ | ಕಳಪೆ ತೀರ್ಪಿಗಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್‌(ಐಒಸಿ) ಬಾಕ್ಸಿಂಗ್ ವಿರುದ್ಧ ಹರಿಹಾಯ್ದಿದ್ದರು. 'ಈ ಹುಡುಗಿ (ವೆಲೆನ್ಸಿಯಾ)ಯನ್ನು ಈ ಹಿಂದೆ ಎರಡು ಬಾರಿ ಸೋಲಿಸಿದ್ದೇನೆ. ರೆಫರಿ ಆಕೆಯ ಕೈಯೆತ್ತಿ ಗೆಲುವು ಘೋಷಿಸಿದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ' ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.