| ಭಾರತಕ್ಕೆ 2ನೇ ಪದಕ ಖಾತ್ರಿಪಡಿಸಿದ ಬಾಕ್ಸರ್ ಲವ್ಲಿನಾ ಟೋಕಿಯೊ: ಮಹಿಳಾ ಬಾಕ್ಸಿಂಗ್ 69 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಭಾರತದ ಲವ್ಲಿನಾ ಬೊರ್ಗೊಹೈನ್, ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಎರಡನೇ ಪದಕ ಗೆದ್ದ ಸಾಧನೆ ಮಾಡಿದೆ. ಈ ಮೊದಲು ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದಿದ್ದರು. ಇದನ್ನೂ ಓದಿ: | ಭಾರತಕ್ಕೆ ಮೊದಲ ಪದಕ; ಬೆಳ್ಳಿ ಗೆದ್ದ ಮೀರಾಬಾಯಿ ಚಾನು !!! @ 4-1 ' . . . #Cheer4India ../kykpKHeR91 ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ನಿಖರ ಪಂಚ್‌ಗಳ ಮೂಲಕ ಗಮನ ಸೆಳೆದ ಲವ್ಲಿನಾ ಚೀನಾ ತೈಪೆಯ ನಿಯೆನ್ ಚಿನ್ ಚೆನ್ ವಿರುದ್ಧ 4-1ರ ಅಂತರದ ಗೆಲುವು ದಾಖಲಿಸಿದರು. | 'ಲವ್ಲಿ ಲವ್ಲಿನಾ'; ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 2ನೇ ಪದಕ ಖಾತ್ರಿ... ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ಗೆ ಲಗ್ಗೆ ಹಾಕುವ ಮೂಲಕ ಕಂಚಿನ ಪದಕ ಖಚಿತಪಡಿಸಿದ್ದಾರೆ. ಇನ್ನೊಂದು ಪಂದ್ಯ ಗೆದ್ದರೆ ಚಿನ್ನ ಪದಕಕ್ಕೆ ಸೆಣಸಲಿದ್ದಾರೆ. ಸೋತರೆ ಬೆಳ್ಳಿ ಪದಕ ಸಿಗಲಿದೆ. 2nd 🇮🇳 🥊@ - #Tokyo2020 !#Cheer4India ../Rc3IU93svF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಸಾಧನೆ ಮಾಡಿರುವ 23 ವರ್ಷದ ಲವ್ಲಿನಾ, ಆಕ್ರಮಣಕಾರಿ ಜೊತೆಗೆ ರಕ್ಷಣಾತ್ಮಕ ಪ್ರದರ್ಶನ ನೀಡುವ ಮೂಲಕ ಮಾಜಿ ವಿಶ್ವ ಚಾಂಪಿಯನ್ ಚಿನ್ ಚೆನ್ ವಿರುದ್ಧ ಮೇಲುಗೈ ಸಾಧಿಸಿದರು. ಕಳೆದ ವರ್ಷ ಕೋವಿಡ್‌ನಿಂದಾಗಿ ಯುರೋಪ್‌ನಲ್ಲಿ ತರಬೇತಿ ಅವಕಾಶವನ್ನು ಕಳೆದುಕೊಂಡಿರುವ ಲವ್ಲಿನಾ ಸಾಧನೆಗೆ ಅದ್ಯಾವುದೂ ಅಡ್ಡಿಯಾಗಲಿಲ್ಲ. ಮಾನಸಿಕ ಹಾಗೂ ದೈಹಿಕ ಬಲದ ಜೊತೆಗೆ ಬಾಕ್ಸಿಂಗ್ ಕೌಶಲ್ಯದಲ್ಲಿ ಮಿಂಚಿರುವ ಅಸ್ಸಾಂನ ಬಾಕ್ಸರ್ ದೇಶದ ಪಾಲಿಗೆ ಹೆಮ್ಮೆಯಾಗಿದ್ದಾರೆ. ಇದನ್ನೂ ಓದಿ: | ಪದಕಕ್ಕೆ ಪಂಚ್; ಮೇರಿ ಕೋಮ್, ವಿಜೇಂದರ್ ಸಾಲಿಗೆ ಲವ್ಲಿನಾ ಮೇರಿ, ವಿಜೇಂದರ್ ಸಾಲಿಗೆ ಲವ್ಲಿನಾ... ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಪದಕ ಗೆದ್ದಿರುವ ಭಾರತದ ಮೂರನೇ ಬಾಕ್ಸರ್ ಎಂಬ ಹಿರಿಮೆಗೆ ಲವ್ಲಿನಾ ಪಾತ್ರರಾಗಿದ್ದಾರೆ. ಈ ಮೂಲಕ ವಿಜೇಂದರ್ ಸಿಂಗ್ ಹಾಗೂ ಮೇರಿ ಕೋಮ್ ಸಾಲಿಗೆ ಸೇರ್ಪಡೆಯಾಗಿದ್ದಾರೆ. 2008ರಲ್ಲಿ ವಿಜೇಂದರ್ ಹಾಗೂ 2012ರಲ್ಲಿ ಮೇರಿ ಕಂಚಿನ ಪದಕ ಗೆದ್ದಿದ್ದರು. ಈಗ ಲವ್ಲಿನಾಗೆ ಅದಕ್ಕಿಂತಲೂ ಉತ್ತಮ ಸಾಧನೆ ಮಾಡುವ ಅವಕಾಶವೊದಗಿ ಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.