| ಒಲಿಂಪಿಕ್ಸ್‌ನಲ್ಲಿ ಸತತ 3ನೇ ಬಾರಿಗೆ ದೀಪಿಕಾ ಪದಕದ ಕನಸು ಭಗ್ನ ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ವಿಶ್ವ ಅಗ್ರ ಶ್ರೇಯಾಂಕಿತೆ ಆರ್ಚರಿ ಪಟು ದೀಪಿಕಾ ಕುಮಾರಿ, ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಇದರೊಂದಿಗೆ ಸತತ ಮೂರನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ದೀಪಿಕಾ, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಇದನ್ನೂ ಓದಿ: : ಆರ್ಚರಿ; ಕ್ವಾರ್ಟರ್‌ಫೈನಲ್‌ ತಲುಪಿದ ದೀಪಿಕಾ ಕುಮಾರಿ ಶುಕ್ರವಾರ ನಡೆದ ಮಹಿಳೆಯರ ವೈಯಕ್ತಿಕ ವಿಭಾಗದ ಅಂತಿಮ ಎಂಟರ ಘಟ್ಟದಲ್ಲಿ ದೀಪಿಕಾ, ದಕ್ಷಿಣ ಕೊರಿಯಾದ ಎನ್ ಸ್ಯಾನ್ ವಿರುದ್ಧ 0-6ರ ಅಂತರದಲ್ಲಿ ಪರಾಭವಗೊಂಡರು. ' #Tokyo2020 0-6 ’ . .# # 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಅಗ್ರ ಶ್ರೇಯಾಂಕಿತೆ ಆರ್ಚರಿ ಪಟುವಾಗಿ ಕಣಕ್ಕಿಳಿದಿದ್ದ ದೀಪಿಕಾ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದರು. ಈ ಬಾರಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸುವುದರೊಂದಿಗೆ ಪದಕದ ಕನಸು ಭಗ್ನಗೊಂಡಿದೆ. ಈಗ ಆರ್ಚರಿ ವಿಭಾಗದಲ್ಲಿ ಭಾರತದ ಏಕ ಮಾತ್ರ ನಿರೀಕ್ಷೆಯಾಗಿರುವ ದೀಪಿಕಾ ಕುಮಾರಿ ಅವರ ಪತಿ ಅತನು ದಾಸ್, ಶನಿವಾರದಂದು ಅಂತಿಮ 16ರ ಹಂತದಲ್ಲಿ ಕಣಕ್ಕಿಳಿಯಲಿದ್ದಾರೆ. 💔 #' ' # . #' 0-6, #Tokyo2020 🏹# | # ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.