: ಓಟದಲ್ಲಿ ಹಿಂದೆ ಬಿದ್ದ ದ್ಯುತಿ; ಸೆಮೀಸ್ ರೇಸ್‌ನಿಂದ ಹೊರಕ್ಕೆ ಟೋಕಿಯೊ: ಭಾರತದ ಭರವಸೆಯಾಗಿದ್ದ ಓಟಗಾರ್ತಿ ದ್ಯುತಿ ಚಾಂದ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮಹಿಳೆಯರ 200 ಮೀಟರ್ ಹೀಟ್ 4ರಲ್ಲಿ ಸ್ಪರ್ಧಿಸಿದ ದ್ಯುತಿ ಚಾಂದ್ ಕೊನೆಯವರಾಗಿ ಗುರಿ ಮುಟ್ಟಿದರು. 23.85 ಸೆಕೆಂಡುಗಳಲ್ಲಿ ಗುರಿ ತಲುಪಿದ ದ್ಯುತಿ, ಈ ಋತುವಿನ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರೂ ಸೆಮಿಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: : ಸಿಂಧುಗೆ ಕಂಚು; ಸತತ 2ನೇ ಬಾರಿ ಪದಕ ಗೆದ್ದ ಸಾಧನೆ ಒಟ್ಟಾರೆಯಾಗಿ 41 ಸ್ಪರ್ಧಿಗಳ ಪೈಕಿ 38ನೇ ಸ್ಥಾನ ಪಡೆದರು. ಈ ಹಿಂದೆ 200 ಮೀ. ಓಟದಲ್ಲಿ 23 ಸೆಕೆಂಡುಗಳಲ್ಲಿ ಗುರಿ ಮುಟ್ಟಿರುವುದು ದ್ಯುತಿ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ' 200m 23.85 7th .# #Tokyo2020 # ಎಲ್ಲಏಳು ಹೀಟ್ಸ್‌ನ ಅಗ್ರ ಮೂವರು ಮತ್ತುಬಳಿಕದ ಅತಿ ವೇಗದ ಮೂವರು ಅಥ್ಲೀಟ್‌ಗಳು ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆದಿದ್ದಾರೆ. ಮಹಿಳೆಯರ 100 ಮೀಟರ್ ಓಟದಲ್ಲೂ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ದ್ಯುತಿ ಚಾಂದ್ ವಿಫಲರಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.