: 'ಕ್ಷಮಿಸಿ ಭಾರತ'; ಕ್ಷಮೆಯಾಚಿಸಿದ ಭಾರತದ ಅಗ್ರ ಬಿಲ್ಲುಗಾರ ಅತನು ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎದುರಾಗಿರುವ ಸೋಲಿನಿಂದ ತೀವ್ರ ನೊಂದಿರುವ ಭಾರತದ ಅಗ್ರ ಬಿಲ್ಲುಗಾರಅತನು ದಾಸ್ ಕ್ಷಮೆಯಾಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅತನು, 'ನನ್ನನ್ನು ಕ್ಷಮಿಸಿ ಭಾರತ' ಎಂದು ಕೈ ಮುಗಿಯುವ ಇಮೋಜಿ ಹಾಕಿದ್ದಾರೆ. 'ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕೀರ್ತಿ ತರಲು ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರ್ಚರಿ: ಬರಿಗೈಯಲ್ಲಿ ಮರಳಿದ ಭಾರತದ ಬಿಲ್ಲುಗಾರರು ಈ ಸಂದರ್ಭದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ, ಭಾರತದ ಆರ್ಚರಿ ಸಂಸ್ಥೆ ಹಾಗೂ ಒಲಿಂಪಿಕ್ ಸಮಿತಿಯಿಂದ ದೊರಕಿರುವ ಅಭೂತಪೂರ್ವ ಬೆಂಬಲವನ್ನು ಸ್ಮರಿಸಿದ್ದಾರೆ. 'ಇಲ್ಲಿಂದ ಮುಂದಕ್ಕೆ ಸಾಗೋಣ. ಇನ್ನೇನು ಹೇಳಲು ಬಯಸುವುದಿಲ್ಲ. ಜಯ್ ಹಿಂದ್' ಎಂದು ಅತನು ದಾಸ್ ಉಲ್ಲೇಖಿಸಿದ್ದಾರೆ. 🙏🏼, ’ . @Media_SAI @indian_archery , @OGQ_India . , . 🇮🇳 ../Kqqm03nt8r ಆರ್ಚರಿಯಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದ ಅತನು ದಾಸ್ ಸೋಲು ಅನುಭವಿಸುದರೊಂದಿಗೆ ದೇಶದ ಬಿಲ್ಲುಗಾರರು ಬರಿಗೈಯಲ್ಲಿ ಮರಳಿದ್ದರು. ಪುರುಷರ ವೈಯಕ್ತಿಕ ವಿಭಾಗದ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಅತನು ದಾಸ್ ಜಪಾನ್‌ನ ತಕಹರು ಪುರುಕಾವ ವಿರುದ್ಧ 4-6ರಲ್ಲಿ ಸೋಲು ಅನುಭವಿಸಿದರು. ಈ ಮೂಲಕ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಎದುರಾಗಿದೆ. ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ, ಸತತ ಮೂರನೇ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಾಗದೇ ವಾಪಸ್ ಆಗಿದ್ದಾರೆ. ಮಹಿಳೆಯರ ವೈಯಕ್ತಿಕ ವಿಭಾಗದ ಎಂಟರ ಘಟ್ಟದಲ್ಲಿ ದೀಪಿಕಾ, ದಕ್ಷಿಣ ಕೊರಿಯಾದ ಎನ್ ಸ್ಯಾನ್ ವಿರುದ್ದ 0-6ರ ಅಂತರದಲ್ಲಿ ಪರಾಭವಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.