ಬಾಕ್ಸಿಂಗ್: ಎಂಟರ ಘಟ್ಟದಲ್ಲಿ ಎಡವಿದ ಸತೀಶ್‌, ಕೈತಪ್ಪಿದ ಪದಕ ಟೋಕಿಯೊ: ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯಾಗಿದ್ದ ಬಾಕ್ಸರ್ ಸತೀಶ್ ಕುಮಾರ್, ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಕಂಚಿನ ಪದಕ ಕೈತಪ್ಪಿದೆ. ಭಾನುವಾರ ನಡೆದ ಪುರುಷರ ಸೂಪರ್ ಹೆವಿವೇಟ್ (91+ ಕೆ.ಜಿ.) ವಿಭಾಗದಲ್ಲಿ ಸತೀಶ್ ಕುಮಾರ್, ವಿಶ್ವ ನಂ.1 ರ‍್ಯಾಂಕ್‌ನ ಉಜ್ಬೇಕಿಸ್ತಾನದ ಬಖೋದಿರ್ ಜಲೋಲೋವ್ ವಿರುದ್ಧ 0-5ರಲ್ಲಿ ಸೋಲು ಅನುಭವಿಸಿದರು. ಇದನ್ನೂ ಓದಿ: | ಬಾಕ್ಸರ್ ಪೂಜಾ ರಾಣಿಗೆ ಕೈತಪ್ಪಿದ ಕಂಚು 32 ವರ್ಷದ ಸತೀಶ್ ಕುಮಾರ್ ದಿಟ್ಟ ಹೋರಾಟವನ್ನು ಪ್ರದರ್ಶಿಸಿದರೂ ಅಗ್ರ ಶ್ರೇಯಾಂಕಿತ ಬಾಕ್ಸರ್ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. 💔 🇮🇳 1st @ 2019 🥇, 🇺🇿' 0-5 @Tokyo2020###Tokyo2020#Cheer4India# ../rX0883ZtLj ಹಾಗೊಂದು ವೇಳೆ ಕನಿಷ್ಠ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಿದ್ದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವಿತ್ತು. ಕಳೆದ ದಿನ ಪೂಜಾ ರಾಣಿ ಸಹ ಅಂತಿಮ ಎಂಟರ ಘಟ್ಟದಲ್ಲಿ ಎಡವಿದ್ದರು. ಶುಕ್ರವಾರ ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ ಲವ್ಲಿನಾ ಬೋರ್ಗೊಹೈನ್ ಸೆಮಿಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.