| ಸ್ಕೇಟ್‌ಬೋರ್ಡಿಂಗ್‌ನಲ್ಲಿ ವಿಶ್ವ ಗೆದ್ದ ಬಾಲಕಿಯರು ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಸ್ಕೇಟ್‌ಬೋರ್ಡಿಂಗ್ ಸ್ಪರ್ಧೆಯಲ್ಲಿ ಬಾಲಕಿಯರು ಅಮೋಘ ಸಾಧನೆ ಮಾಡಿದ್ದಾರೆ. ಮಹಿಳೆಯರ ಸ್ಕೇಟ್‌ಬೋರ್ಡಿಂಗ್ ಪಾರ್ಕ್ ಸ್ಪರ್ಧೆಯಲ್ಲಿ 19 ವರ್ಷದ ಜಪಾನ್‌ನ ಸಕುರಾ ಯೊಸೊಝುಮಿ ಚಿನ್ನದ ಪದಕ ಜಯಿಸಿದ್ದಾರೆ. ಆತಿಥೇಯ ಜಪಾನ್‌ ಮೂಲದವರೇ ಆದ 12 ವರ್ಷದ ಕೊಕೊನಾ ಹಿರಾಕಿ ಬೆಳ್ಳಿ ಮತ್ತು 13 ವರ್ಷದ ಬ್ರಿಟನ್‌ನ ಸ್ಕೈ ಬ್ರೌನ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ:ಒಲಿಂಪಿಕ್ಸ್‌: ವಿಮಾನದಲ್ಲಿ ಆಸ್ಟ್ರೇಲಿಯಾ ಕ್ರೀಡಾಪಟುಗಳ ಕಿರಿಕ್‌ ’ @ # @skyandocean_ ../vyDXtVmU02 ಬ್ರಿಟನ್‌ನ ಸ್ಕೈ ಬ್ರೌನ್ ಪದಕ ಗೆಲ್ಲುವ ನೆಚ್ಚಿನ ತಾರೆಯಾಗಿ ಹೊರಹೊಮ್ಮಿದ್ದರು. ಆದರೆ ಪದಕ ಸುತ್ತಿನಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ ಪರಿಣಾಮ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 1970ರ ದಶಕದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಖಾಲಿ ಈಜುಕೊಳದಿಂದ ಉದಯಿಸಿರುವ ಈ ರೀತಿಯ ಸ್ಕೇಟ್‌ಬೋರ್ಡಿಂಗ್ ಸ್ಪರ್ಧೆಯು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿದೆ. ' # 🥉# # # #Tokyo2020 ../LOdfgQQ1y4 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.