ಕುಸ್ತಿ: ಸೆಮಿಫೈನಲ್‌ನಲ್ಲಿ ದೀಪಕ್‌ಗೆ ಸೋಲು, ಕಂಚಿನ ಆಸೆ ಜೀವಂತ ಟೋಕಿಯೊ: ಕುಸ್ತಿಪಟು ರವಿಕುಮಾರ್ ದಹಿಯಾ ಐತಿಹಾಸಿಕ ಸಾಧನೆಯನ್ನು ಸಮಗಟ್ಟುವಲ್ಲಿ ದೀಪಕ್ ಪುನಿಯಾ ವಿಫಲರಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಪುರುಷರ 86 ಕೆ.ಜಿ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ದೀಪಕ್ ಪೂನಿಯಾ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಇದನ್ನೂ ಓದಿ: ಕುಸ್ತಿ: ಇತಿಹಾಸ ರಚಿಸಿದ ರವಿಕುಮಾರ್ ದಹಿಯಾ ಫೈನಲ್‌ಗೆ ಲಗ್ಗೆ ಅಂತಿಮ ನಾಲ್ಕರ ಘಟ್ಟದಲ್ಲಿ ದೀಪಕ್ ಪುನಿಯಾ, ಅಮೆರಿಕದ ಡೇವಿಡ್ ಮೊರಿಸ್ ವಿರುದ್ಧ 10-0 ಅಂತರದಲ್ಲಿ ಸೋಲಿಗೆ ಶರಣಾದರು. ಈಗ ಕಂಚಿನ ಪದಕಕ್ಕಾಗಿಹೋರಾಟಲಿದ್ದಾರೆ. ಈ ಮೂಲಕ ಪದಕದ ಆಸೆ ಜೀವಂತವಾಗಿದೆ. #: ’ ' 86kg. . # #Tokyo2020 # # ../ ಇದಕ್ಕೂ ಮೊದಲು ಪುರುಷರ 57 ಕೆ.ಜಿ ವಿಭಾಗದಲ್ಲಿ ರವಿಕುಮಾರ್ ದಹಿಯಾ ಪದಕ ಸುತ್ತಿಗೆ ಪ್ರವೇಶಿಸಿದ್ದರು. ಈ ಮೂಲಕ ಇತಿಹಾಸ ರಚಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.