| ಭರ್ಜರಿ ಜಯ ದಾಖಲಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಪೋಗಟ್‌ ಟೋಕಿಯೊ: ಭಾರತದ ಭರವಸೆಯ ಕುಸ್ತಿಪಟು ವಿನೇಶಾ ಪೋಗಟ್ ಗುರುವಾರ 53 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಪ್ಯಾಟಿನ್ಸನ್‌ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. (53kg) , ' 7-1ರ ಅಂತರದಲ್ಲಿ ಪೋಗಟ್‌ ಅವರು ಸೋಫಿಯಾ ಪ್ಯಾಟಿನ್ಸನ್‌ ವಿರುದ್ಧ ಜಯ ಸಾಧಿಸಿದರು. "ಈ ಪಂದ್ಯದಲ್ಲಿ ವಿನೇಶಾ ಗೆದ್ದಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಅವಳು ಚೆನ್ನಾಗಿ ಆಡಿದ್ದಳು. ನನಗೆ ಸಂತೋಷವಾಗಿದೆ’ ಎಂದು ಹರಿಯಾಣದ ಬಾಲಾಲಿಯಲ್ಲಿ ವಿನೇಶಾ ಫೋಗಟ್ ಅವರ ತಾಯಿ ಪ್ರೇಮಲತಾ ಹೇಳಿದ್ದಾರೆ. " . . ' ," , , ../x3Yvt6vewC ವಿನೇಶಾಗೆ ಇದು ಎರಡನೇ ಒಲಿಂಪಿಕ್ಸ್‌. ಕಳೆದ ಬಾರಿ ರಿಯೊದಲ್ಲೂ ಅವರು ಪಾಲ್ಗೊಂಡಿದ್ದರು. ಸೋಫಿಯಾ ಈಗಾಗಲೇ ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.