ಭಾರತದ ಹಾಕಿ ಪಾಲಿಗೆ ಕಂಚಿನ ಪದಕ ʼಟರ್ನಿಂಗ್ ಪಾಯಿಂಟ್ʼ: ವಿರೇನ್ ರಸ್ಕಿನ್‌ ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವು ಕಂಚಿನ ಪದಕ ಗೆದ್ದಿರುವುದು ದೇಶದಲ್ಲಿ ಹಾಕಿ ಆಟದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ (ಮಹತ್ವದ ತಿರುವು) ಆಗಲಿದೆ ಎಂದುಮಾಜಿ ನಾಯಕ ವಿರೇನ್‌ ರಸ್ಕಿನ್‌ ಅವರು ಹೇಳಿದ್ದಾರೆ. ಭಾರತ ತಂಡವು ಬರೋಬ್ಬರಿ41 ವರ್ಷಗಳ ಬಳಿಕ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ. ಸೆಮಿಫೈನಲ್‌ನಲ್ಲಿಬೆಲ್ಜಿಯಂ ಎದುರು ಸೋತು ಫೈನಲ್‌ ತಲುಪುವಲ್ಲಿ ವಿಫಲವಾಗಿದ್ದಟೀಂ ಇಂಡಿಯಾ, ಬಳಿಕ ಜರ್ಮನಿ ಪಡೆಯನ್ನು5-4 ಅಂತರದಿಂದ ಮಣಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಇದನ್ನೂ ಓದಿ: : ಹಾಕಿಯಲ್ಲಿ ಮರುಕಳಿಸಿದ ಗತಕಾಲದ ವೈಭವ; ಇತಿಹಾಸದತ್ತ ಹದ್ದು ನೋಟ ಈ ಬಗ್ಗೆ ಮಾತನಾಡಿರುವ ರಸ್ಕಿನ್‌, ʼಭಾರತದ ಹಾಕಿ ಪಾಲಿಗೆ ಇದು ಮಹತ್ವದ ಸಾಧನೆ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾವು41 ವರ್ಷಗಳಿಂದ ಕಾಯುತ್ತಿದ್ದೆವು.1980ರ ಮಾಸ್ಕೊ ಒಲಿಂಪಿಕ್ಸ್‌ನಿಂದ ಈವರೆಗೆ ಹಲವು ತಲೆಮಾರಿನ ಆಟಗಾರರು ಫೈನಲ್‌ ತಲುಪಲು ತಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದರು. ಆದರೆ, ಯಶಸ್ವಿಯಾಗಿರಲಿಲ್ಲ. ಈ ಬಾರಿಯ ತಂಡ ಕಂಚಿನ ಪದಕ ಗೆದ್ದಿರುವುದು ನಂಬಲಸಾಧ್ಯವಾದ ಸಾಧನೆಯಾಗಿದೆʼ ʼಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಪದಕ ಗೆಲ್ಲುವುದು ಭಾರತದ ಪ್ರತಿಯೊಬ್ಬ ಹಾಕಿ ಆಟಗಾರನ ಕನಸು. ನನ್ನ ಪ್ರಕಾರ ಇದುಭಾರತದ ಹಾಕಿಗೆ ಟರ್ನಿಂಗ್‌ ಪಾಯಿಂಟ್‌ ಆಗಲಿದೆʼ ಎಂದು ಹೇಳಿದ್ದಾರೆ. ʼಖಂಡಿತಾ, ಈ ಹಂತದಲ್ಲಿ ಯಾವುದೇ ಪದಕ ಗೆಲ್ಲುವುದು ಶ್ರೇಷ್ಠ ಸಾಧನೆ. ಇವತ್ತಿಗೂ ನಾವು ಪದಕಕ್ಕಾಗಿ ಜರ್ಮನಿಯಂತಹ ಪ್ರಬಲತಂಡದ ವಿರುದ್ಧ ಆಡಬೇಕಾಯಿತು.1-3 ಅಂತರದಿಂದ ಹಿಂದಿದ್ದರೂ ಪುಟಿದೆದ್ದು ಆಡಿದ ತಂಡಕ್ಕೆ ಪೂರ್ಣ ಶ್ರೇಯ ಸಲ್ಲಬೇಕು.‌ ಕೋಚ್‌ ಗ್ರಹಾಂ ರೀಯಾದ್‌ ಮತ್ತು ಪೂರ್ಣ ತರಬೇತಿ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಮನ್‌ಪ್ರೀತ್‌ ಸಿಂಗ್‌ ಮತ್ತು ಪಿ.ಆರ್.‌ ಶ್ರೀಜೇಶ್‌ ಅವರಂಥ ಹಿರಿಯ ಆಟಗಾರರೂ ತಮ್ಮ ಪಾತ್ರ ನಿಭಾಯಿಸಿದ್ದಾರೆʼ ಎಂದು ಶ್ಲಾಘಿಸಿದ್ದಾರೆ. ಇವನ್ನೂ ಓದಿ * : ಹಾಕಿ ಗೆಲುವಿನ ಐತಿಹಾಸಿಕ ಕ್ಷಣ ಮಿಸ್ ಮಾಡದೇ ನೋಡಿ *ಹಾಕಿ ಗೆಲುವು ಕ್ರಿಕೆಟ್ ವಿಶ್ವಕಪ್‌ ಗೆಲುವಿಗಿಂತಲೂ ಮಿಗಿಲಾದದ್ದು: ಗಂಭೀರ್ *ಹಾಕಿಯಲ್ಲಿ ಭಾರತಕ್ಕೆ ಕಂಚು: ಇದು ನಿಜವಾದ ಚಕ್‌ದೇ ಎಂದ ಬಾಲಿವುಡ್‌ ತಾರೆಯರು *ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕೈಚಳಕ; ಅಂದು ಹಿಟ್ಲರ್‌ನ ಜರ್ಮನಿಯ ವಿರುದ್ಧ ಗೆಲುವು * : ಐತಿಹಾಸಿಕ ಗೆಲುವು ಸಾಧಿಸಿದ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರ *: ಐತಿಹಾಸಿಕ ಕ್ಷಣ, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಕಂಚು... * -| ಸೆಮಿಫೈನಲ್‌ನಲ್ಲಿ ಎಡವಿದ ಭಾರತದ ಹಾಕಿ ತಂಡ *ವೈರಲ್‌ ವಿಡಿಯೊ: ಹಾಕಿ ಗೆದ್ದ ಭಾರತ ತಂಡದ ಆಟಗಾರರಿಗೆ ಕರೆ ಮಾಡಿ ಮಾತಾಡಿದ ಪ್ರಧಾನಿ * | ಸೆಮಿಫೈನಲ್‌ನಲ್ಲಿ ಹೋರಾಡಿ ಸೋತ ಭಾರತದ ಮಹಿಳಾ ಹಾಕಿ ತಂಡ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.