| ಪದಕ ಗೆದ್ದ ಭಾರತ ಹಾಕಿ ತಂಡ: ಆಗಸ್ಟ್ 5 ಸ್ಮರಣೀಯ ದಿನ ಎಂದ ಮೋದಿ ನವದೆಹಲಿ: ಭಾರತ ಹಾಕಿ ತಂಡವು 41 ವರ್ಷಗಳಿಂದ ಅನುಭವಿಸುತ್ತಿದ್ದ ಒಲಿಂಪಿಕ್ಸ್‌ ಪದಕದ ಬರ ಆಗಸ್ಟ್‌ 5 ರಂದು ಕೊನೆಗೊಂಡಿದೆ. ಹೀಗಾಗಿ ಈ ದಿನವು ಪ್ರತಿಯೊಬ್ಬ ಹಾಕಿ ಪ್ರೇಮಿ, ಕ್ರೀಡಾಭಿಮಾನಿಯ ಪಾಲಿಗೆ ಅತ್ಯಂತ ಸ್ಮರಣೀಯವಾಗಿ ಉಳಿಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿರುವ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ, ತಂಡದ ಎಲ್ಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: : ಹಾಕಿಯಲ್ಲಿ ಮರುಕಳಿಸಿದ ಗತಕಾಲದ ವೈಭವ; ಇತಿಹಾಸದತ್ತ ಹದ್ದು ನೋಟ ʼಪ್ರತಿಯೊಬ್ಬ ಭಾರತೀಯನ ಮನಸ್ಸು ಮತ್ತು ಹೃದಯದಲ್ಲಿ ಹಾಕಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಪ್ರತಿಯೊಬ್ಬ ಹಾಕಿ ಪ್ರೇಮಿ ಮತ್ತು ಕ್ರೀಡಾಭಿಮಾನಿ ಪಾಲಿಗೆ ಆಗಸ್ಟ್‌ 5, 2021 ಅತ್ಯಂತ ಸ್ಮರಣೀಯ ದಿನವಾಗಿ ಉಳಿಯಲಿದೆʼ ಎಂದು ಟ್ವೀಟ್‌ ಮಾಡಿದ್ದಾರೆ. . , 5th 2021 . #Tokyo2020 ../fbGGR1ZHsT ಪಂದ್ಯದಲ್ಲಿ ಗೋಲ್‌ಕೀಪರ್‌ ಆಗಿದ್ದ ಪಿ.ಆರ್‌. ಶ್ರೀಜೇಶ್‌ ʼಅದ್ಭುತ ಪ್ರದರ್ಶನʼ ತೋರಿದರು ಎಂದು ಶ್ಲಾಘಿಸಿರುವ ಮೋದಿ, ಮನ್‌ಪ್ರೀತ್‌ ಸಿಂಗ್‌ ಅವರ ನಾಯಕತ್ವ ಕೌಶಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ಎದುರು ಸೋಲುಕಂಡಿದ್ದ ಟೀಂ ಇಂಡಿಯಾ, ಮೂರನೇ ಸ್ಥಾನಕ್ಕಾಗಿ ಜರ್ಮನಿ ವಿರುದ್ಧ ಸೆಣಸಾಟ ನಡೆಸಿತು. ಈ ಪಂದ್ಯವನ್ನು 5-4 ಅಂತರದಿಂದ ಗೆಲ್ಲುವುದರೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಪಂದ್ಯದಲ್ಲಿ ಸಿಮ್ರನ್‌ಜಿತ್‌ ಸಿಂಗ್‌ (17 ಮತ್ತು 34ನೇ ನಿಮಿಷದಲ್ಲಿ) ಎರಡು ಗೋಲು ಗಳಿಸಿದರೆ, ಹಾರ್ದಿಕ್‌ ಸಿಂಗ್‌ (27ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (29ನೇ ನಿಮಿಷ) ಹಾಗೂ ರೂಪಿಂದರ್‌ ಪಾಲ್‌ ಸಿಂಗ್‌ (31ನೇ ನಿಮಿಷ) ತಲಾ ಒಂದೊಂದು ಗೋಲು ಗಳಿಸಿದರು. ಟ್ವಿಟರ್‌ ಮೂಲಕ ಸಂಭ್ರಮ ಹಂಚಿಕೊಳ್ಳುವುದಕ್ಕೂ ಮುನ್ನ ಪ್ರಧಾನಿ ಮೋದಿ ಅವರು, ಆಟಗಾರರು ಮತ್ತು ಕೋಚ್‌ ಗ್ರಹಾಂ ರಿಯಾದ್‌ ಅವರಿಗೆ ಕರೆ ಮಾಡಿ ಅಭಿನಂದನೆ ಹೇಳಿದ್ದರು. , , . . ! . #Tokyo2020 ...' . . , ! #Tokyo2020 . @16Sreejesh! . . #Tokyo2020 3rd ... , , . @manpreetpawar07. . #Tokyo2020 ' #Tokyo2020 , . , . . ಇವನ್ನೂ ಓದಿ * : ಹಾಕಿ ಗೆಲುವಿನ ಐತಿಹಾಸಿಕ ಕ್ಷಣ ಮಿಸ್ ಮಾಡದೇ ನೋಡಿ *ಹಾಕಿ ಗೆಲುವು ಕ್ರಿಕೆಟ್ ವಿಶ್ವಕಪ್‌ ಗೆಲುವಿಗಿಂತಲೂ ಮಿಗಿಲಾದದ್ದು: ಗಂಭೀರ್ *ಹಾಕಿಯಲ್ಲಿ ಭಾರತಕ್ಕೆ ಕಂಚು: ಇದು ನಿಜವಾದ ಚಕ್‌ದೇ ಎಂದ ಬಾಲಿವುಡ್‌ ತಾರೆಯರು *ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕೈಚಳಕ; ಅಂದು ಹಿಟ್ಲರ್‌ನ ಜರ್ಮನಿಯ ವಿರುದ್ಧ ಗೆಲುವು * : ಐತಿಹಾಸಿಕ ಗೆಲುವು ಸಾಧಿಸಿದ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರ *: ಐತಿಹಾಸಿಕ ಕ್ಷಣ, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಕಂಚು... * -| ಸೆಮಿಫೈನಲ್‌ನಲ್ಲಿ ಎಡವಿದ ಭಾರತದ ಹಾಕಿ ತಂಡ *ವೈರಲ್‌ ವಿಡಿಯೊ: ಹಾಕಿ ಗೆದ್ದ ಭಾರತ ತಂಡದ ಆಟಗಾರರಿಗೆ ಕರೆ ಮಾಡಿ ಮಾತಾಡಿದ ಪ್ರಧಾನಿ * | ಸೆಮಿಫೈನಲ್‌ನಲ್ಲಿ ಹೋರಾಡಿ ಸೋತ ಭಾರತದ ಮಹಿಳಾ ಹಾಕಿ ತಂಡ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.