| ಕುಸ್ತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಬಜರಂಗ್ ಪೂನಿಯಾ ಚಿಬಾ: ಭಾರತದ ಭರವಸೆಯಾಗಿರುವ ಕುಸ್ತಿಪಟು ಬಜರಂಗ್ ಪೂನಿಯಾ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಬಜರಂಗ್ ಪೂನಿಯಾ ಇರಾನ್‌ನ ಮೊರ್ತೆಜಾ ಗಿಯಾಸಿ ವಿರುದ್ದ ಗೆಲುವು ದಾಖಲಿಸಿದರು. ಇದನ್ನೂ ಓದಿ: ಹಾಕಿ: ಬ್ರಿಟನ್ ವಿರುದ್ಧ ಸೋಲು, ಮಹಿಳಾ ತಂಡಕ್ಕೆ ಕೈತಪ್ಪಿದ ಕಂಚು ಸೆಮಿಫೈನಲ್ ಕದನವು ಭಾರತೀಯ ಕಾಲಮಾನ ಅಪರಾಹ್ನ 2.52ಕ್ಕೆ ಸರಿಯಾಗಿ ಆರಂಭವಾಗಲಿದೆ. ಅಲ್ಲದೆ ಬಜರಂಗ್ ಪೂನಿಯಾ ಪದಕ ಗೆಲ್ಲುವ ಅಪಾರ ಭರವಸೆಯನ್ನು ಹೊಂದಿದ್ದಾರೆ. : @ | ://./# # # # ../BgdfdH3w7Y ಈ ಮೊದಲು ಪ್ರೀ-ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಬಜರಂಗ್, ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ವಿರುದ್ಧ ಮೇಲುಗೈ ಸಾಧಿಸಿದರು. ಏತನ್ಮಧ್ಯೆ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಸೋಲಿನ ಆಘಾತ ಎದುರಿಸಿರುವ ಸೀಮಾ ಬಿಸ್ಲಾ, ಹೊರಬಿದ್ದಿದ್ದಾರೆ. : ಮಹಿಳಾ ಹಾಕಿ ತಂಡದ ಬಗ್ಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಮೆಚ್ಚುಗೆ ಗುರುವಾರದಂದು ಪುರುಷರ 57 ಕೆ.ಜಿ ವಿಭಾಗದಲ್ಲಿ ಭಾರತದ 23 ವರ್ಷದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಎರಡನೇ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾದರು. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್‌ ಕುಮಾರ್ 66ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ! # # | #Tokyo2020 | # | # | @ ../jyuWm9un0Z ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.