| ಭಾರತದ ಮಹಿಳಾ ಹಾಕಿ ತಂಡವನ್ನು ಹೊಗಳಿದ ಗ್ರೇಟ್‌ ಬ್ರಿಟನ್‌ ತಂಡ ದೆಹಲಿ: ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿಯ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತ ತಂಡ ಗ್ರೇಟ್‌ ಬ್ರಿಟನ್‌ ಎದುರು ಸೋಲುಂಡಿದೆ. ಆದರೆ, ಭಾರತೀಯ ಮಹಿಳಾ ಹಾಕಿ ತಂಡವನ್ನು ಗೆದ್ದ ಗ್ರೇಟ್‌ ಬ್ರಿಟನ್‌ ತಂಡ ಹೊಗಳಿದೆ. , 🙏@ ' #Tokyo2020 - 👏 ../9ce6j3lw25 ಪಂದ್ಯದ ನಂತರ ಟ್ವೀಟ್‌ ಮಾಡಿರುವ ಗ್ರೇಟ್‌ ಬ್ರಿಟನ್‌ ಮಹಿಳಾ ಹಾಕಿ ತಂಡ, ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿ ಇಂಡಿಯಾ ವಿಶೇಷವಾದದ್ದನ್ನು ಸಾಧಿಸಿದೆ. ಬರಲಿರುವ ವರ್ಷಗಳು ತಂಡಕ್ಕೆ ಉಜ್ವಲವಾಗಿರಲಿದೆ,’ ಎಂದು ಹೇಳಿದೆ. ಇದನ್ನೂ ಓದಿ: : ಸೋಲಿನ ನೋವು ತಾಳಲಾಗದೇ ಕಣ್ಣೀರಿಟ್ಟ ಆಟಗಾರ್ತಿಯರು ಇದಕ್ಕೂ ಮೊದಲು ಗುರುವಾರ ಭಾರತೀಯ ಪುರುಷರ ತಂಡವು ಜರ್ಮನಿಯ ವಿರುದ್ಧ ಗೆಲುವು ಸಾಧಿಸಿ, ಕಂಚಿನ ಪದಕವನ್ನು ಗಳಿಸಿತ್ತು. 41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾರತದ ಪುರಷರ ಹಾಕಿ ತಂಡವು ಪದಕದ ಸಾಧನೆ ಮಾಡಿತ್ತು. ಇವುಗಳನ್ನೂ ಓದಿ ಹಾಕಿ: ಬ್ರಿಟನ್ ವಿರುದ್ಧ ಸೋಲು, ಮಹಿಳಾ ತಂಡಕ್ಕೆ ಕೈತಪ್ಪಿದ ಕಂಚು : ಕಂಚು ಕೈತಪ್ಪಿದರೂ ಚಿನ್ನಕ್ಕಿಂತ ಹೆಚ್ಚು ಮಿನುಗಿದ ಭಾರತದ ಮಹಿಳಾ ಹಾಕಿ ತಂಡ... : ಮಹಿಳಾ ಹಾಕಿ ತಂಡದ ಬಗ್ಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಮೆಚ್ಚುಗೆ ‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.