| ಗಾಲ್ಫ್‌ನಲ್ಲಿ ಪದಕ ವಂಚಿತರಾದರೂ ದಾಖಲೆ ಬರೆದ ಕನ್ನಡತಿ ಅದಿತಿ ‌ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದಾರೆ. ಆದರೂ, ದಾಖಲೆ ಬರೆದಿದ್ದಾರೆ. # : ಯುವ ಗಾಲ್ಫರ್ ಅದಿತಿಗೆ 4ನೇ ಸ್ಥಾನ; ಐತಿಹಾಸಿಕ ಸಾಧನೆ # # # # #Cheer4India # # ://./oXYzEu71lW ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಗಾಲ್ಫ್ ಆಟಗಾರ್ತಿಯೊಬ್ಬರು ನಾಲ್ಕನೇ ಸ್ಥಾನಕ್ಕೇರಿರುವುದು ಇದೇ ಮೊದಲು. ಹೀಗಾಗಿ ಬೆಂಗಳೂರಿನ ಅದಿತಿ ಒಲಿಂಪಿಕ್ಸ್‌ ಗಾಲ್ಫ್‌ನಲ್ಲಿ ಸೋತಿದ್ದರೂ, ಐತಿಹಾಸಿಕ ಸಾಧನೆ ಮಾಡಿದ್ದಾರೆ. 23 ವರ್ಷದ ಅದಿತಿ 2016ರ ರಿಯೋ ಆವೃತ್ತಿಯಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದರು. ಆ ಕೂಟದಲ್ಲಿ 41 ನೇ ಸ್ಥಾನ ಪಡೆದಿದ್ದ ಅವರು, ಈ ಬಾರಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲ, ಅವರು ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದರು. ಆರಂಭದ ಸುತ್ತಿನಿಂದಲೂ ಅಮೋಘ ಸಾಮರ್ಥ್ಯ ತೋರುತ್ತ ಮುನ್ನಡೆ ಸಾಧಿಸಿದ್ದ ಅದಿತಿಗೆ ಕೊನೆಯ ಸುತ್ತಿನಲ್ಲಿ ಅದೃಷ್ಟ ಕೈಕೊಟ್ಟಿತ್ತು. ಈ ಆಟದಲ್ಲಿ ಅಮೆರಿಕದ ನೆಲ್ಲಿ ಕೊರ್ಡಾ ಚಿನ್ನದ ಪದಕ ಗೆದ್ದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.