ಸಲ್ಮಾನ್ ಖಾನ್ ಭೇಟಿಯಾದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ದೇಶದ ಹೆಮ್ಮೆಯ ವೇಟ್‌ಲಿಫ್ಟರ್ಮೀರಾಬಾಯಿ ಚಾನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಸಲ್ಮಾನ್ ಖಾನ್ ಅವರು ಮೀರಾಬಾಯಿ ಅವರನ್ನು ಭೇಟಿಯಾದ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೀರಾಬಾಯಿ ಜತೆ ತೆಗೆಸಿಕೊಂಡ ಫೋಟೊವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಮೀರಾಬಾಯಿ ರಿಟ್ವೀಟ್ ಮಾಡಿದ್ದು, ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೇನೆ. ನಿಮ್ಮನ್ನು ಭೇಟಿಯಾಗಬೇಕೆಂಬ ಕನಸು ಕೊನೆಗೂ ಈಡೇರಿದೆ ಎಂದಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಮೀರಾಬಾಯಿ ಅವರು ಸಲ್ಮಾನ್ ಖಾನ್‌ಗೆ ನೀಡಿರುವ ಶಾಲು ಚರ್ಚೆಗೆ ಗ್ರಾಸವಾಗಿದೆ. @mirabai_chanu .. … ! ../KlrTU01xdv ದುಬೈ ವಿಮಾನದಲ್ಲಿ ಏಕೈಕ ಪ್ರಯಾಣಿಕ: ಬೇಸರ ತೋಡಿಕೊಂಡ ನಟ ಮಾಧವನ್ ಶಾಲಿನಲ್ಲಿ ಕೃಷ್ಣಮೃಗದ ಚಿತ್ರವಿದೆ. ಹಿಂದೆ ಸಲ್ಮಾನ್ ಖಾನ್ ಹೆಸರು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಕೂಡ ಕೇಳಿಬಂದಿತ್ತು. ಹೀಗಾಗಿ ಸಾಮಾಜಿಕ ತಾಣಗಳಲ್ಲಿ ಈ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಸಿಗರೇಟ್ ಪ್ಯಾಕ್‌ನಿಂದಾಗಿ ಟ್ರೋಲ್‌ಗೆ ಒಳಗಾದ ಇರಾ ಖಾನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.