ಟೆನ್‌ಪಿನ್ ಬೌಲಿಂಗ್‌: ಮುನ್ನಡೆಯಲ್ಲಿ ಕಿಶನ್‌, ಪ್ರೀಮಲ್‌ ಬೆಂಗಳೂರು: ಹಾಲಿ ಚಾಂಪಿಯನ್‌ ಕಿಶನ್ ಆರ್‌ ಹಾಗೂ ಪ್ರೀಮಲ್‌ ಜೋವಾನ್ ಅವರು ರಾಜ್ಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ಅಂತ್ಯದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಮುನ್ನಡೆ ಗಳಿಸಿದರು. ಇಲ್ಲಿಯ ಚರ್ಚ್‌ಸ್ಟ್ರೀಟ್‌ ಅಮೀಬಾದಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ ಕಿಶನ್ ಒಟ್ಟು 3533 ಪಾಯಿಂಟ್ಸ್ ಕಲೆಹಾಕಿದರು. ಆಕಾಶ್ ಅಶೋಕ್‌ ಕುಮಾರ್ (3514) ಹಾಗೂ ಸಲ್ಮಾನ್ ಖಾನ್‌ (3459) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಪ್ರೀಮಲ್‌ ಜೋವಾನ್ ಒಟ್ಟು 3013 ಪಾಯಿಂಟ್ಸ್ ಹೊಂದಿದ್ದಾರೆ. ಗೀತಾ ಪೂಜಾರಿ (2977) ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.