ಜರ್ಮನಿಯ ಹಾನ್ ಗರಡಿಯಲ್ಲಿ ಪಳಗಿದ ಪ್ರತಿಭೆ ನೀರಜ್‌ ಚೋಪ್ರಾ ಬೆಂಗಳೂರು: ನೀರಜ್‌ ಚೋಪ್ರಾ ಸಾಧನೆಯ ಶ್ರೇಯ ಅವರ ಕೋಚ್‌ ಯುವೆ ಹಾನ್‌ ಅವರಿಗೂ ಸಲ್ಲಬೇಕು. ಜರ್ಮನಿಯ ಹಾನ್‌ 1984ರ ಜುಲೈ 20ರಂದು ನಡೆದಿದ್ದ ಕೂಟವೊಂದರಲ್ಲಿ 104.80 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ವಿಶ್ವ ದಾಖಲೆ ಬರೆದಿದ್ದರು. ಈವರೆಗೂ ಈ ದಾಖಲೆ ಮುರಿಯಲು ಯಾರಿಗೂ ಆಗಿಲ್ಲ. 1985ರಲ್ಲಿ ಕ್ಯಾನ್‌ಬೆರಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ96.96 ಮೀಟರ್ಸ್‌ ಸಾಮರ್ಥ್ಯ ತೋರಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. 1982ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದನ್ನೂ ಓದಿ: : ಚಿನ್ನದ ಹುಡುಗ ನೀರಜ್ ಚೋಪ್ರಾ ಹಾನ್‌ ಅವರು 2017ರ ನವೆಂಬರ್‌ನಲ್ಲಿ ಭಾರತ ಜಾವೆಲಿನ್‌ ಥ್ರೋ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. ಅವರ ಮಾಸಿಕ ವೇತನ ₹5.9 ಲಕ್ಷ ಎಂದು ಹೇಳಲಾಗಿದೆ. ಒಲಿಂಪಿಕ್ಸ್‌ವರೆಗೂ ಮಾತ್ರ ಅವರೊಂದಿಗೆ ಎಎಫ್‌ಐ ಒಪ್ಪಂದ ಮಾಡಿಕೊಂಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.