ಪ್ಯಾರಾಲಿಂಪಿಕ್ಸ್:‌ ವಿನೋದ್‌ ಕುಮಾರ್‌ಗೆ ಕಂಚು; ಭಾರತಕ್ಕೆ ಭಾನುವಾರ ಮೂರನೇ ಪದಕ ಟೋಕಿಯೊ:ಜಪಾನ್‌ನಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿಭಾರತದವಿನೋದ್‌ ಕುಮಾರ್ ಅವರುಕಂಚಿನ ಪದಕ ಗೆದ್ದುಕೊಂಡಿದ್ದಾರೆ.‌ ಇದರೊಂದಿಗೆ ಭಾರತಕ್ಕೆಭಾನುವಾರ ಒಟ್ಟು ಮೂರು ಪದಕಗಳು ಬಂದಂತಾಗಿದೆ. 19.91 ಮೀಟರ್‌ ದೂರ ಎಸೆದು ಪದಕ್ಕೆ ಕೊರಳೊಡ್ಡಿದ್ದೂ ಮಾತ್ರವಲ್ಲದೆ ಏಷಿಯನ್‌ ದಾಖಲೆಯನ್ನೂ ನಿರ್ಮಿಸಿದರು. ಪೋಲೆಂಡ್‌ನ ಪಿಯೋಟರ್‌ ಕೊಸೆವಿಕ್ಜ್‌ (20.02ಮೀ), ಕ್ರೊವೇಷಿಯಾದ ವೆಲಿಮಿರ್‌ ಸ್ಯಾಂಡೊರ್‌ (19.98ಮೀ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಬಾಚಿಕೊಂಡರು. ಇದೇ ದಿನ ಟೇಬಲ್‌ ಟೆನಿಸ್‌ ಸ್ಪರ್ಧೆಯಲ್ಲಿ ಭಾವಿನಾ ಬೆನ್‌ ಪಟೇಲ್‌ಮತ್ತು ಎತ್ತರ ಜಿಗಿತ ಸ್ಪರ್ಧೆಯಲ್ಲಿ ನಿಶಾದ್‌ ಕುಮಾರ್‌ ಬೆಳ್ಳಿ ಪದಕ ಗೆದ್ದಿದ್ದಾರೆ ಎಂಬುದು ವಿಶೇಷ. #, .. 30s 42yrs @ . . # @ @ @Media_SAI #Praise4Para @Tokyo2020 ../ ಇವನ್ನೂ ಓದಿ *ಪ್ಯಾರಾಲಿಂಪಿಕ್ಸ್:‌ ಹೈ ಜಂಪ್‌ನಲ್ಲಿಬೆಳ್ಳಿ ಗೆದ್ದಭಾರತದ ನಿಶಾದ್‌ ಕುಮಾರ್ *ಪ್ಯಾರಾಲಿಂಪಿಕ್ಸ್‌‌: ಭಾರತಕ್ಕೆ ಮೊದಲ ಪದಕ; ಐತಿಹಾಸಿಕ ಬೆಳ್ಳಿ ಗೆದ್ದ ಭಾವಿನಾ *: ಭಾವಿನಾಗೆ ಪ್ರಧಾನಿ, ರಾಷ್ಟ್ರಪತಿ ಸೇರಿ ಗಣ್ಯರ ಅಭಿನಂದನೆ *: ಬೆಳ್ಳಿ ಗೆದ್ದ ಭಾವಿನಾಗೆ ಗುಜರಾತ್ ಸರ್ಕಾರದಿಂದ ₹3 ಕೋಟಿ *ಭಾವಿನಾ: ಪ್ಯಾರಾಲಿಂಪಿಕ್ಸ್‌ನ ಬೆಳ್ಳಿ ಬೆಳಕು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.