ಟೆನಿಸ್‌: ಸೃಷ್ಟಿ, ಕೀರ್ತನ್‌ಗೆ ಪ್ರಶಸ್ತಿ ಬೆಂಗಳೂರು: ಕೀರ್ತನ್ ವಿಶ್ವಾಸ್ ಹಾಗೂ ಸೃಷ್ಟಿ ಕಿರಣ್ ಅವರು ಎಫ್‌ಎಸ್‌ಎ ಎಐಟಿಎ 10 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸೋಮವಾರ ಪ್ರಶಸ್ತಿ ಜಯಿಸಿದರು. ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆದ ಟೂರ್ನಿಯ ಬಾಲಕರ ಫೈನಲ್‌ನಲ್ಲಿ ಕೀರ್ತನ್‌ 4-3 (3), 4-3 (1)ರಿಂದ ಯಶ್‌ ಕುಮಾರ್ ಅವರನ್ನು ಮಣಿಸಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸೃಷ್ಟಿ 4-0, 4-3 (7-5)ರಿಂದ ಉನ್ನತಿ ಮುರಳೀಧರ್‌ ಎದುರು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.