ಟೇಬಲ್ ಟೆನಿಸ್‌: ರಕ್ಷಿತ್, ಮರಿಯಾಗೆ ಪ್ರಶಸ್ತಿ ಸಂಭ್ರಮ ಬೆಂಗಳೂರು: ಅಕೊಲೆಡ್ಸ್‌ ಕ್ಲಬ್‌ನ ರಕ್ಷಿತ್ ಬಾರಿಗಿಡದ ಮತ್ತು ಕೆನರಾ ಬ್ಯಾಂಕ್‌ನ ಮರಿಯಾ ರೋನಿ ಅವರು ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸಿದ್ದ ಸಿ.ವಿ.ಎಲ್‌ ಶಾಸ್ತ್ರಿ ಸ್ಮಾರಕ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಮಲ್ಲೇಶ್ವರ ಅಸೋಸಿಯೇಷನ್‌ನಲ್ಲಿ ನಡೆದ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ರಕ್ಷಿತ್ ನೈರುತ್ಯ ರೈಲ್ವೆಯ ಕಲೈವಣ್ಣನ್ ವಿರುದ್ಧ 11-7, 12-10, 11-5, 11-8ರಲ್ಲಿ ಜಯ ಗಳಿಸಿದರು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಜೈನ್ ಕಾಲೇಜಿನ ಅನರ್ಘ್ಯ ಮಂಜುನಾಥ್ ಅವರನ್ನು ಮರಿಯಾ 8-11, 12-10, 11-9, 11-6, 11-8ರಲ್ಲಿ ಮಣಿಸಿದರು. ಆದರೆ ಜೂನಿಯರ್ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡು ಅನರ್ಘ್ಯ ಮಂಜುನಾಥ್ ಸಂಭ್ರಮಿಸಿದರು. ಫೈನಲ್‌ನಲ್ಲಿ ಅವರು ಅದಿತಿ ಜೋಶಿ ವಿರುದ್ಧ 11-5, 11-7, 11-4, 16-18, 11-5ರಲ್ಲಿ ಜಯ ಸಾಧಿಸಿದರು. ಬಾಲಕರ ವಿಭಾಗದ ಫೈನಲ್‌ನಲ್ಲಿ ಸ್ಕೈಸ್‌ನ ಶ್ರೀಕಾಂತ್ ಕಶ್ಯಪ್9-11, 6-11, 11-8, 11-7, 12-10, 11-8ರಲ್ಲಿ ಆಕಾಶ್ ವಿರುದ್ಧ ಗೆದ್ದರು. ನಾನ್ ಮೆಡಲಿಸ್ಟ್‌ ಸಿಂಗಲ್ಸ್‌ನ ಬಾಲಕರ ವಿಭಾಗದಲ್ಲಿ ಎಂಎಸ್‌ಎಸ್‌ಟಿಟಿಎಯ ಗೌರವ್11-8, 11-6, 11-9ರಲ್ಲಿ ಸಿದ್ಧಾಂತ್‌ ಎದುರು ಗೆದ್ದು ಪ್ರಶಸ್ತಿ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.