ಗಾಲ್ಫ್‌: ಸಾಬಿಕ್‌, ಆಯುಷಿ ಚಾಂಪಿಯನ್‌ ಬೆಂಗಳೂರು: ಬೆಂಗಳೂರಿನ ಸಾಬಿಕ್‌ ಸಲೀಮ್‌ ಹಾಗೂ ಆಯುಷಿ ಕಿಶೋರ್‌ ಅವರು ಯುಎಸ್‌ ಕಿಡ್ಸ್ ಸೌತರ್ನ್‌ ಸ್ವಿಂಗ್‌ ಗಾಲ್ಫ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ (15–18 ವರ್ಷದವರು) ಚಾಂಪಿಯನ್ ಪಟ್ಟ ಧರಿಸಿದರು. ಇಲ್ಲಿಯ ಈಗಲ್ಟನ್‌ ಗಾಲ್ಫ್‌ ರೆಸಾರ್ಟ್‌ನಲ್ಲಿ ಬುಧವಾರ ತಲಾ 30 ಪಾಯಿಂಟ್ಸ್ ಕಲೆಹಾಕಿದ ಇವರಿಬ್ಬರು ಬಹುತೇಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಥಾನ ಗಿಟ್ಟಿಸಿದರು. ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರನ್ನು ಭಾರತ ಕ್ರಿಕೆಟ್‌ ತಂಡದ ಹಿರಿಯ ವಿಕೆಟ್‌ ಕೀಪರ್‌ ಸಯ್ಯದ್‌ ಕಿರ್ಮಾನಿ ಗೌರವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.