: ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಹರಿಯಾಣದಿಂದ ₹6 ಕೋಟಿ ಬಹುಮಾನ ಚಂಡೀಗಡ: ಒಲಿಂಪಿಕ್ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ನೀರಜ್‌ ಚೋಪ್ರಾಗೆ ಹರಿಯಾಣ ಸರ್ಕಾರ ₹6 ಕೋಟಿ ಬಹುಮಾನ ಘೋಷಿಸಿದೆ. ಚೋಪ್ರಾ ಅವರಿಗೆ ನಗದು ಬಹುಮಾನ ಮತ್ತು ಉನ್ನತ ದರ್ಜೆಯ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಘೋಷಿಸಿದ್ದಾರೆ. ಓದಿ: : ರಟ್ಟೆಯ ಕಸುವು- ಚಿನ್ನದ ಚೆಲುವು ರಾಜ್ಯದ ಪಂಚಕುಲದಲ್ಲಿ ತಲೆ ಎತ್ತಲಿರುವ ಅಥ್ಲೆಟಿಕ್ಸ್‌ ಕೇಂದ್ರಕ್ಕೆ ಚೋಪ್ರಾ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗುವುದು. ರಾಜ್ಯದ ನೀರಜ್ ಚೋಪ್ರಾ, ರವಿ ದಹಿಯಾ ಮತ್ತು ಬಜರಂಗ್ ಪೂನಿಯಾ ಅವರನ್ನು ಗೌರವಿಸುವ ಸಮಾರಂಭ ಆಗಸ್ಟ್ 13ರಂದು ಪಂಚಕುಲದಲ್ಲಿ ನಡೆಯಲಿದೆ ಎಂದು ಖಟ್ಟರ್ ತಿಳಿಸಿದ್ದಾರೆ. ಈ ಮಧ್ಯೆ, ಪಂಜಾಬ್ ಸರ್ಕಾರ ಕೂಡ ನೀರಜ್‌ ಅವರಿಗೆ ₹ 2 ಕೋಟಿ ಬಹುಮಾನ ನೀಡಲು ನಿರ್ಧರಿಸಿದೆ. ಓದಿ: : ಚಿನ್ನದ ಹುಡುಗ ನೀರಜ್ ಚೋಪ್ರಾ .@Neeraj_chopra1 के #Tokyo2020 में गोल्ड मेडल जीतने पर मुख्यमंत्री श्री @ ने दी देश को बधाई, प्रदेश की खेल नीति के अनुसार 6 करोड़ का नगद पुरस्कार, क्लास-1 की नौकरी व रियायती दर पर प्लाट दिया जाएगा. ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.