ಒಲಿಂಪಿಕ್ಸ್‌ನಲ್ಲಿ ಭಾರತ ಪಾಕಿಸ್ತಾನ ಹಣಾಹಣಿ; ಗೆಲುವಿನ ನಗೆ ಬೀರಿದ ನೀರಜ್ ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋದಲ್ಲಿ ಚಿನ್ನ ಗೆದ್ದಿರುವ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ದೊರಕಿರುವ ಚೊಚ್ಚಲ ಚಿನ್ನದ ಪದಕ ಇದಾಗಿದೆ. ಈ ನಡುವೆ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಅಥ್ಲೀಟ್‌ಗಳ ನಡುವಣ ನಿಕಟ ಪೈಪೋಟಿಗೆ ವೇದಿಕೆಯಾಗಿತ್ತು. ಇಲ್ಲಿ ಪಾಕಿಸ್ತಾನ ಸ್ಪರ್ಧಿಯನ್ನು ಮೀರಿ ನಿಂತಿರುವ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅತ್ತ ಪಾಕಿಸ್ತಾನದ ಅರ್ಷದ್ ನದೀಮ್ ಪದಕ ಗೆಲ್ಲಲಾಗದೇ ನಿರಾಸೆ ಅನುಭವಿಸಿದರು. ಇದನ್ನೂ ಓದಿ: : ಚಿನ್ನದ ಹುಡುಗ ನೀರಜ್ ಚೋಪ್ರಾ ಈ ಹಿಂದೆ ಏಷ್ಯನ್ ಟೂರ್ನಿಯಲ್ಲೂ ನೀರಜ್ ಹಾಗೂ ನದೀಮ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಹಾಗಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಹೆಚ್ಚಿನ ರೋಚಕತೆ ಮನೆ ಮಾಡಿತ್ತು. ಪದಕ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 87 ಮೀಟರ್‌ಗಳಿಗೂ ದೂರ ಜಾವೆಲಿನ್ ಎಸೆದ ನೀರಜ್ ಪದಕವನ್ನು ಖಾತ್ರಿಪಡಿಸಿದರು. ಅತ್ತ ಐದನೇ ಸ್ಥಾನಕ್ಕೆ ಕುಸಿದ ನದೀಮ್ ಅವರಿಗೆ ಗರಿಷ್ಠ 84.62 ಮೀಟರ್ ದೂರವಷ್ಟೇ ಜಾವೆಲಿನ್ ಎಸೆಯಲು ಸಾಧ್ಯವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.