ಬ್ಯಾಡ್ಮಿಂಟನ್‌: ತಾನ್ಯಾ ಜೋಡಿಗೆ ಪ್ರಶಸ್ತಿ ಬೆಂಗಳೂರು: ಕರ್ನಾಟಕದ ತಾನ್ಯಾ ಹೇಮಂತ್‌ ಅವರು ಉತ್ತರಾಖಂಡದ ಅದಿತಿ ಭಟ್‌ ಜೊತೆಗೂಡಿ ಯೊನೆಕ್ಸ್ ಸನ್‌ರೈಸ್‌ ಅಖಿಲ ಭಾರತ ಜೂನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಚಂಡೀಗಡದಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬುಧವಾರ ಈ ಜೋಡಿಯು ಉತ್ತರಪ್ರದೇಶದ ಶೈಲಜಾ ಶುಕ್ಲಾ–ಶ್ರುತಿ ಮಿಶ್ರಾ ಜೋಡಿಯನ್ನು 21–11, 21–19ರಿಂದ ಮಣಿಸಿತು. ಸೆಮಿಫೈನಲ್‌ ಪಂದ್ಯದಲ್ಲಿ ತಾನ್ಯಾ ಹಾಗೂ ಅದಿತಿ ಅವರು ರಿಯಾ ಸಾಚನ್‌–ದೀಪ್‌ಶಿಖಾ ಸಿಂಗ್‌ ಎದುರು 21–10, 21–7ರಿಂದ ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.