ಸಚಿನ್ ಮಾತುಗಳು ಸ್ಫೂರ್ತಿದಾಯಕ: ಮೀರಾಬಾಯಿ ಚಾನು ಬೆಂಗಳೂರು: ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮುಂಬೈಗೆ ತೆರಳಿದ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಅದರ ಜತೆಗೆ, ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರನ್ನು ಕೂಡ ಭೇಟಿಯಾಗಿದ್ದಾರೆ. ಸಚಿನ್ ಜತೆ ಭೇಟಿಯ ನೆನಪುಗಳನ್ನು ಒಲಿಂಪಿಕ್ಸ್ ತಾರೆ ಮೀರಾಬಾಯಿ ಹಂಚಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಬೇಕೆಂಬ ಉತ್ಕಟ ಆಸೆ ಹೊಂದಿದ್ದ ಮೀರಾಬಾಯಿ, ಕ್ರಿಕೆಟ್ ದಿಗ್ಗಜ ಸಚಿನ್ ಅವರನ್ನು ಕೂಡ ಭೇಟಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. (@mirabai_chanu) ಅವರ ಜ್ಞಾನ ಮತ್ತು ಮಾತುಗಳು ನಿಜಕ್ಕೂ ಸ್ಪೂರ್ತಿದಾಯಕ. ಅವು ಯಾವತ್ತೂ ನಮ್ಮೊಂದಿಗಿರುತ್ತದೆ. ನಿಜಕ್ಕೂ ಸಚಿನ್ ಅವರನ್ನು ಭೇಟಿಯಾದ ಕ್ಷಣ ಖುಷಿ ಕೊಟ್ಟಿದೆ ಎಂದು ಮೀರಾಬಾಯಿ ಚಾನು ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಭೇಟಿಯಾದ ಕುಸ್ತಿಪಟು ಮೀರಾಬಾಯಿ ಚಾನು ಸಚಿನ್ ಮತ್ತು ಮೀರಾ ಭೇಟಿಯ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಬಾರ್ಸಿಲೋನಾ ತೊರೆದು ಪಿಎಸ್‌ಜಿ ಕ್ಲಬ್ ಸೇರಿದ ಮೆಸ್ಸಿಗೆ ಭರ್ಜರಿ ಸ್ವಾಗತ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.