ಪಂಕಜ್‌ಗೆ ಪ್ರಶಸ್ತಿ ಪುಣೆ: ಬಿಲಿಯರ್ಡ್ಸ್ ಆಟಗಾರ, ಕನ್ನಡಿಗ ಪಂಕಜ್‌ ಅಡ್ವಾಣಿ ಅವರು ಮತ್ತೊಂದು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇಲ್ಲಿ ನಡೆದ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಮಂಗಳವಾರ ಅವರು ಸೌರವ್‌ ಕೊಠಾರಿ ಅವರನ್ನು 5–2ರಿಂದ ಮಣಿಸಿ ಕಿರೀಟ ಧರಿಸಿದರು. ಮೊದಲ ಫ್ರೇಮ್‌ನಲ್ಲೇ ಮುಗ್ಗರಿಸಿದರೂ ಎದೆಗುಂದದ ಪಂಕಜ್‌, 13–150, 152–12, 151–0, 62–150, 150–45, 150–48, 150–2ರಿಂದ ಗೆದ್ದು ಬೀಗಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.