ಹಂಟರ್ಸ್‌ಗೆ ಗೆಲುವು ಹೈದರಾಬಾದ್‌: ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಹೈದರಾಬಾದ್‌ ಹಂಟರ್ಸ್‌ ತಂಡ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಐದನೇ ಆವೃತ್ತಿಯ ಪಂದ್ಯದಲ್ಲಿ ಗೆಲುವು ದಾಖಲಿಸಿತು. ಜಿ.ಎಂ.ಸಿ.ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಹಂಟರ್ಸ್‌ 4–3ಯಿಂದ ಮುಂಬೈ ರಾಕೆಟ್ಸ್‌ ತಂಡವನ್ನು ಸೋಲಿಸಿತು. ಪುರುಷರ ಡಬಲ್ಸ್‌ ಮತ್ತು ಸಿಂಗಲ್ಸ್‌ (ಟ್ರಂಪ್‌) ಪಂದ್ಯಗಳಲ್ಲಿ ಗೆದ್ದ ರಾಕೆಟ್ಸ್‌ ತಂಡವು 3–0 ಮುನ್ನಡೆ ಪಡೆಯಿತು. ಮಹಿಳೆಯರ ಸಿಂಗಲ್ಸ್‌ ವಿಭಾಗದ ‘ಟ್ರಂಪ್‌’ ಪಂದ್ಯದಲ್ಲಿ ಹಂಟರ್ಸ್‌ ತಂಡದ ಪಿ.ವಿ.ಸಿಂಧು 15–5, 15–10ರಲ್ಲಿ ಶ್ರೇಯಾಂಸಿ ಪರದೇಶಿ ಅವರನ್ನು ಮಣಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿದರು. ನಂತರ ನಡೆದ ಪುರುಷರ ಎರಡನೇ ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್‌ ಪಂದ್ಯಗಳಲ್ಲೂ ಮಿಂಚಿದ ಹಂಟರ್ಸ್‌ ತಂಡ ಗೆಲುವಿನ ತೋರಣ ಕಟ್ಟಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.