ಪಿಬಿಎಲ್‌: ಸೆಮಿಗೆ ಬೆಂಗಳೂರು ಹೈದರಾಬಾದ್‌: ತೈ ಜು ಯಿಂಗ್‌ ಮತ್ತು ಬ್ರೈಸ್‌ ಲೆವರ್ಡೆಜ್‌ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ರ‍್ಯಾಪ್ಟರ್ಸ್‌ ತಂಡ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಐದನೇ ಆವೃತ್ತಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಗುರುವಾರ ನಡೆದ ‘ಮಾಡು ಇಲ್ಲವೇ ಮಡಿ’ ಹೋರಾಟದಲ್ಲಿ ಹಾಲಿ ಚಾಂಪಿಯನ್‌ ರ‍್ಯಾಪ್ಟರ್ಸ್‌ 5–0ರಲ್ಲಿ ಅವಧ್‌ ವಾರಿಯರ್ಸ್‌ ತಂಡವನ್ನು ಮಣಿಸಿತು. ಪುರುಷರ ಸಿಂಗಲ್ಸ್‌ ವಿಭಾಗದ ‘ಟ್ರಂಪ್‌’ ಪಂದ್ಯದಲ್ಲಿ ಲೆವರ್ಡೆಜ್‌ 15–9, 15–9 ನೇರ ಗೇಮ್‌ಗಳಿಂದ ಅಜಯ್‌ ಜಯರಾಮ್‌ ಅವರನ್ನು ಸೋಲಿಸಿದರು. ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ತೈ ಜು ಯಿಂಗ್‌ 15–12, 15–12ರಲ್ಲಿ ಬೀವೆನ್‌ ಜಾಂಗ್‌ ವಿರುದ್ಧ ಗೆದ್ದರು. ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ರ‍್ಯಾಪ್ಟರ್ಸ್‌ ತಂಡ ‍ಪುಣೆ 7 ಏಸಸ್‌ ವಿರುದ್ಧ ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.