ಟೇಬಲ್‌ ಟೆನಿಸ್‌: ಶರತ್‌ ಮುನ್ನಡೆ ಬುಡಾಪೆಸ್ಟ್‌:ಭಾರತದ ಆಚಂತ ಶರತ್‌ ಕಮಲ್‌, ಐಟಿಟಿಎಫ್‌ ವಿಶ್ವ ಟೂರ್‌ ಹಂಗೇರಿಯನ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗಗಳಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದರು. ಶರತ್‌ ಕಮಲ್‌, ಮಣಿಕಾ ಬಾತ್ರಾ ಅವರನ್ನೊಳಗೊಂಡ ಮಿಶ್ರ ಡಬಲ್ಸ್ ತಂಡ ಗುರುವಾರ 11–8, 9–11, 6–11, 11–9, 11–7ರಲ್ಲಿ ಆ್ಯಡಂ ಸುಡಿ– ಸಾಂಡ್ರಾ ಪೆರ್ಗಲ್‌ ಜೋಡಿಯನ್ನು ಸೋಲಿಸಿತು. ಪುರುಷರ ಡಬಲ್ಸ್‌ನಲ್ಲಿ ಶರತ್‌, ಜಿ.ಸತ್ಯನ್‌ ಜೊತೆಗೂಡಿ 11–6, 11–8, 8–11, 9–11, 11–9 ರಿಂದ ಜಪಾನ್‌ನ ಶುನ್ಸುಕೆ ತೊಗಮಿ– ಯುಕಿಯಾ ಉಡಾ ಜೋಡಿಯನ್ನು ಸೋಲಿಸಿ ಎಂಟರ ಘಟ್ಟ ತಲುಪಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.