ಹ್ಯಾಂಡ್‌ಬಾಲ್‌: ಫ್ರಾನ್ಸ್‌ಗೆ ಚಿನ್ನ ಟೋಕಿಯೊ (ಎಎಫ್‌ಪಿ): ಫ್ರಾನ್ಸ್‌ ತಂಡವು ಮಹಿಳೆಯರ ಹ್ಯಾಂಡ್‌ಬಾಲ್‌ ಸ್ಪರ್ಧೆಯ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿತು. ಫೈನಲ್‌ನಲ್ಲಿ ಫ್ರಾನ್ಸ್‌ 30–25ರಿಂದ ರಷ್ಯಾ ತಂಡವನ್ನು ಸೋಲಿಸಿತು. ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ 16–16 ಸಮಬಲ ಕಂಡುಬಂದಿತ್ತು. ನಂತರ ಸತತ ಆರು ಗೋಲುಗಳನ್ನು ದಾಖಲಿಸಿದ ಫ್ರಾನ್ಸ್‌ ವನಿತೆಯರು ಮಿಂಚಿದರು. ಈ ತಂಡದ ಗೋಲ್‌ಕೀಪರ್‌ ಕ್ಲಿಯೋಪಾತ್ರ ಡಾರ್ಲಿಯುಕ್ಸ್‌ ಕೂಡ ಮೋಡಿ ಮಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.