ಚೆಸ್‌: ಭರತ್‌ಗೆ ಜಯ ಮಾಸ್ಕೊ: ಭಾರತದ ಭರತ್‌ ಸುಬ್ರಮಣಿಯಂ ಅವರು ಏರೋಫ್ಲಾಟ್‌ ಓಪನ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಚೀನಾದ ಗ್ರ್ಯಾಂಡ್‌ಮಾಸ್ಟರ್‌ ಜಿಯಾಂಚೊ ಜೊವುಗೆ ಆಘಾತ ನೀಡಿದ್ದಾರೆ. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 3.5ಕ್ಕೆ ಹೆಚ್ಚಿಸಿಕೊಂಡು ‘ಎ’ ಗುಂಪಿನ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಇಂಟರ್‌ನ್ಯಾಷನಲ್‌ ಮಾಸ್ಟರ್‌ ಭರತ್‌, ಟೂರ್ನಿಯಲ್ಲಿ ದಾಖಲಿಸಿದ ಮೂರನೇ ಗೆಲುವು ಇದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.