ಒಲಿಂಪಿಕ್‌ ಅರ್ಹತಾ ಟೂರ್ನಿ ಮುಂದಕ್ಕೆ ನವದೆಹಲಿ : ಕಿರ್ಗಿಸ್ತಾನದ ಬಿಷೆಕ್‌ನಲ್ಲಿ ಮಾರ್ಚ್‌ 27 ರಿಂದ 29ರವರೆಗೆ ನಡೆಯಬೇಕಾಗಿದ್ದ ಏಷ್ಯನ್‌ ಒಲಿಂಪಿಕ್‌ ಕುಸ್ತಿ ಅರ್ಹತಾ ಸುತ್ತಿನ ಟೂರ್ನಿಯನ್ನು ಶುಕ್ರವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಕೋವಿಡ್‌ ಸೋಂಕಿನ ಆತಂಕದಿಂದ ಈ ಕ್ರಮ ಕೈಗೊಳ್ಳಲಾಗಿದೆ. ವೈರಸ್‌ ಆತಂಕದಿಂದಾಗಿ, ಮುಂದಿನ ಸೂಚನೆಯವರೆಗೆ ಯಾವುದೇ ಕ್ರೀಡಾಕೂಟಗಳನ್ನು ನಡೆಸದಂತೆ ಕಿರ್ಗಿಸ್ತಾನ ಸರ್ಕಾರ ನಿರ್ದೇಶನ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.